Slide
Slide
Slide
previous arrow
next arrow

ದಾಂಡೇಲಿ ಜನತಾ ವಿದ್ಯಾಲಯ ಸಂಯುಕ್ತ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

300x250 AD

ದಾಂಡೇಲಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಜನತಾ ವಿದ್ಯಾಲಯ ಸಂಯುಕ್ತ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದೆ.
ಕಾಲೇಜಿನ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ 52 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ಉತ್ತೀರ್ಣಗೊಂಡು 82.69% ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 52 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರ ಪೈಕಿ 43 ವಿದ್ಯಾರ್ಥಿಗಳು ತೇರ್ಗಡೆಗೊಂಡು 82.69% ಫಲಿತಾಂಶ ಬಂದಿದೆ. ಒಟ್ಟಾರೆಯಾಗಿ ಕಲಾ ಮತ್ತು ವಾಣಿಜ್ಯ ವಿಭಾಗ ಸೇರಿ ಪರೀಕ್ಷೆ ಬರೆದ ಒಟ್ಟು 104 ವಿದ್ಯಾರ್ಥಿಗಳಲ್ಲಿ 86 ವಿದ್ಯಾರ್ಥಿಗಳು ಉತ್ತೀರ್ಣಗೊಂಡು 82.69% ಫಲಿತಾಂಶವನ್ನು ಕಾಲೇಜು ಪಡೆದುಕೊಂಡಿದೆ.
ಕಲಾ ವಿಭಾಗದಲ್ಲಿ ಅಜಯ್ ಕಾಳೆ 549 ಅಂಕಗಳೊ0ದಿಗೆ 91.5% ಫಲಿತಾಂಶವನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. 88.88% ಫಲಿತಾಂಶದೊಂದಿಗೆ 533 ಅಂಕಗಳನ್ನು ಪಡೆದ ಮಾಲಾಶ್ರೀ ಜಂಗಲೆ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಶಿವಾನಂದ ಚಿಕೋಪ ಈತನು 515 ಅಂಕಗಳೊAದಿಗೆ 85.83% ಫಲಿತಾಂಶದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ.
ವಾಣಿಜ್ಯ ವಿಭಾಗದಲ್ಲಿ ಸಾವಿತ್ರಿ ಶೆಳಕೆ ಈಕೆ 90.16% ಫಲಿತಾಂಶದೊಂದಿಗೆ 541 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಸಮಿಯುಲ್ಲಾ ಅಂಬಾರಿ 511 ಅಂಕಗಳೊ0ದಿಗೆ 85.16% ಫಲಿತಾಂಶವನ್ನು ಪಡೆದು ದ್ವಿತೀಯ ಸ್ಥಾನ ಪಡೆದರೆ ಯಶವಂತ ಬೆಣ್ಣೆ 510 ಅಂಕಗಳೊAದಿಗೆ 85% ಫಲಿತಾಂಶವನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ.

300x250 AD
Share This
300x250 AD
300x250 AD
300x250 AD
Back to top