ಶಿರಸಿ: ಇಲ್ಲಿನ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯಲ್ಲಿ ಭಾರತದ ಅತಿ ದೊಡ್ಡ ಇಂಧನ ಜಾಲವಾದ ನಯಾರಾ ಪೆಟ್ರೋಲ್ ಬಂಕ್ನ್ನು ಏ.17 ರ ಬೆಳಿಗ್ಗೆ 10.30ಕ್ಕೆ ರಿಬ್ಬನ್ ಕತ್ತರಿಸುವ ಮೂಲಕವಾಗಿ ದಿ ಅಗ್ರಿಕಲ್ಚರ್ ಸರ್ವಿಸ್ & ಡೆವಲಪ್ಮೆಂಟ್ ಕೋ-ಆಪ್ ಸೊಸೈಟಿ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ ಉದ್ಘಾಟಸಿದರು.
ಈ ಸಂದರ್ಭದಲ್ಲಿ ಟಿ.ಎಸ್.ಎಸ್. ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಸಂಘದ ಆಡಳಿತ ಮಂಡಳಿ ಸದಸ್ಯರುಗಳು, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನೂತನ ಪೆಟ್ರೋಲ್ ಬಂಕ್ನ ಶುಭಾರಂಭದ ಕೊಡುಗೆಯಾಗಿ ಏ.17 ರಿಂದ ಏ. 22 ರವರೆಗೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡಿಸೈಲ್ಗೆ ರೂ.1/- ರಿಯಾಯಿತಿ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.