• Slide
    Slide
    Slide
    previous arrow
    next arrow
  • ಟಿಎಸ್ಎಸ್ ಆಯೋಜಿಸಿದ್ದ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

    300x250 AD

    ಶಿರಸಿ: ಇಲ್ಲಿನ ಟಿಎಸ್ಎಸ್ ಕಟ್ಟಡ ನಿರ್ಮಾಣ ಸಾಮಗ್ರಿ ವಿಭಾಗದಲ್ಲಿ ಫೆ.01 ರಿಂದ ಮಾ.15 ರವರೆಗೆ ರೂ.50,000 ಮೇಲ್ಪಟ್ಟ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಖರೀದಿಸಿದ ಗ್ರಾಹಕರಿಗೆ ನೀಡಲಾಗಿದ್ದ ಲಕ್ಕಿ ಕೂಪನ್‌ಗಳನ್ನು ಸಂಗ್ರಹಿಸಿ ಲಕ್ಕಿ ಡ್ರಾ ಮೂಲಕ ವಿಜೇತರುಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮವನ್ನು ಏ.17ರಂದು ಟಿಎಸ್ಎಸ್ ಕಟ್ಟಡ ನಿರ್ಮಾಣ ಸಾಮಗ್ರಿ ವಿಭಾಗದಲ್ಲಿ ನಡೆಸಲಾಯಿತು.

    ಪ್ರಥಮ ಬಹುಮಾನವಾದ ವಾಷಿಂಗ್ ಮಶಿನ್ ವಿಜೇತರಾಗಿ ಪದ್ಮನಾಭ ಪರಮ ಭಟ್ಟ ಆನಗೋಡಕೊಪ್ಪ, ದ್ವಿತೀಯ ಬಹುಮಾನ ರೆಫ್ರಿಜರೇಟರ್ ವಿಜೇತರಾಗಿ ನಾರಾಯಣ ಜಟ್ಟು ಗೌಡ, ತೃತೀಯ ಬಹುಮಾನ ಎಲ್. ಇ. ಡಿ. ಟಿವಿ ವಿಜೇತರಾಗಿ ಬಸವರಾಜ ಬಸಪ್ಪ ಶಿವನಂಚಿ, ಹಾಗೂ ಚತುರ್ಥ ಬಹುಮಾನ ಆಂಡ್ರಾಯ್ಡ್ ಮೊಬೈಲ್ ವಿಜೇತರಾಗಿ ಓಹಿಲೇಶ್ವರ ಸಣ್ಣಪ್ಪ ನಾಯ್ಕ ಗುಡ್ನಾಪುರ ಇವರುಗಳು ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ರೂ.40,000/- ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆಯನ್ನು ನೀಡಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    300x250 AD

      ಈ ಸಂದರ್ಭದಲ್ಲಿ ದಿ ಅಗ್ರಿಕಲ್ಚರ್ ಸರ್ವಿಸ್ & ಡೆವಲಪ್‌ಮೆಂಟ್ ಕೋ-ಆಪ್ ಸೊಸೈಟಿ ಲಿ., ಶಿರಸಿಯ ಅಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಟಿ.ಎಸ್.ಎಸ್. ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ, ಸಂಘದ ಆಡಳಿತ ಮಂಡಳಿ ಸದಸ್ಯರುಗಳು, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳು , ಸಿಬ್ಬಂದಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top