ಶಿರಸಿ: SOF Science Olympiad foundation ರವರ ಅಂತರಾಷ್ಟ್ರೀಯ ಮಟ್ಟದ ಒಲಿಂಪಿಯಾಡ್ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಲಯನ್ಸ್ ಶಾಲೆಯ ಒಟ್ಟು 70 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 16 ಮಕ್ಕಳು ಚಿನ್ನದ ಪದಕ ಗಳಿಸಿ ಸಾಧನೆ ಮೆರೆದಿದ್ದಾರೆ. ಮತ್ತು ಕುಮಾರಿ ಇಶಾ ಪಟವರ್ಧನ್ (10ನೇ ತರಗತಿ) ಕುಮಾರಿ ಸಂತೋಷಿ ಪಟಗಾರ (8ನೇ ತರಗತಿ)ಕು. ಅಭಿನೀತ್ ಭಟ್ (6ನೇ ತರಗತಿ) ಕು. ಪ್ರಮಥ್ MH (7ನೇ ತರಗತಿ) ಇವರು ಮುಂದಿನ ಹಂತದ ಪರೀಕ್ಷೆಗೂ ಆಯ್ಕೆಯಾಗಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ಮಾರ್ಗದರ್ಶನ ನೀಡಿದ ಶಾಲೆಯ ಶಿಕ್ಷಕಿಯರಾದ ಶ್ರೀಮತಿ ಶೃತಿ ಪವಾರ್ ಮತ್ತು ಶ್ರೀಮತಿ ಕವಿತಾ ಭಟ್ ಇವರನ್ನು ಮತ್ತು ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳನ್ನು, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ವೃಂದ, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.