Slide
Slide
Slide
previous arrow
next arrow

ನಿಲ್ಕುಂದ-ಸಂತೆಗುಳಿ ಸರ್ವಋತು ರಸ್ತೆ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಖೇದಕರ: ರವೀಂದ್ರ ನಾಯ್ಕ

300x250 AD

ಸಿದ್ಧಾಪುರ: ಲೋಕೊಪಯೋಗಿ ರಸ್ತೆಯೆಂದು ಬ್ರಿಟಿಷ್ ಕಾಲದಿಂದಲೂ ದಾಖಲಿಸಲ್ಪಟ್ಟು, ಇತ್ತೀಚಿನ 2 ದಶಕಗಳಿಂದ ಸರಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೊಳಗಾಗಿ ಇತ್ತೀಚೆಗೆ ಸಾರ್ವಜನಿಕರ ಹೋರಾಟ ಜರುಗಿದಾಗಲೂ ಸಿದ್ಧಾಪುರ ತಾಲೂಕಿನ ನಿಲ್ಕುಂದ ಮಾರ್ಗವಾಗಿ ಕುಮಟ ತಾಲೂಕಿನ ಸಂತೆಗುಳಿ ಸಂಪರ್ಕಕ್ಕೆ ಸರ್ವಋತು ರಸ್ತೆಯ ಬೇಡಿಕೆ ಈಡೇರದ ಕುರಿತು ಸಾಮಾಜಿಕ ಚಿಂತಕ ರವೀಂದ್ರ ನಾಯ್ಕ ವಿಷಾದ ವ್ಯಕ್ತಪಡಿಸಿದರು.

 ರಸ್ತೆಗುಂಟ ಗಿಡಗುಂಟಿ ರಾಶಿ, ಕುಸಿದು ಬಿದ್ದ ಸೇತುವೆಗಳು, ಅಲ್ಲಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದಿರುವ ಮರಗಳು, ನಿರ್ವಹಣೆ ಇಲ್ಲದೇ ರಸ್ತೆ ಕೊರಕಲು ಆಗಿರುವ ದೃಶ್ಯ, ರಸ್ತೆಗುಂಟ ಲೋಕಪಯೋಗಿ ಇಲಾಖೆ ಹಾಕಿದ ಅನಾಥವಾಗಿ ನಿಂತಿರುವ ಮೈಲಿಗಲ್ಲುಗಳು, ಜೀರ್ಣಾವ್ಯವಸ್ಥೆಯಲ್ಲಿರುವ ಸೇತುವೆಗಳು, ಸಂಪೂರ್ಣ ನಿರ್ವಹಣೆ, ರಕ್ಷಣೆ ಹಾಗೂ ಅಭಿವೃದ್ಧಿ ಇಲ್ಲದೇ ಸಾರ್ವಜನಿಕರಿಗೆ ತೀವ್ರ ತೊಂದರೆಯಿOದ ಹೋರಾಟದ ಹಿನ್ನೆಲೆಯಲ್ಲಿ ಅಲ್ಪ ಮೊತ್ತದ, ತಾತ್ಪೂರ್ತಿಕ ಕಾರ್ಯ ಜರುಗಿದ್ದರೂ, ಪೂರ್ಣ ಪ್ರಮಾಣದ ಸರ್ವಋತು ರಸ್ತೆಗೆ ಸರಕಾರ ಕ್ರಮ ಜರುಗಿಸದೇ ಇರುವ ಕುರಿತು ಅವರು ಖೇದ ವ್ಯಕ್ತಪಡಿಸಿದರು.

ಮಲೆನಾಡು ಮತ್ತು ಕರಾವಳಿ ಭಾಗಕ್ಕೆ ಸಂಪರ್ಕ ರಸ್ತೆಯಾಗಿರುವ ನಿಲ್ಕುಂದ-ಸ0ತೆಗುಳಿ ಸರ್ವಋತು ರಸ್ತೆಗೆ ಸರಕಾರ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷಿಸುವುದು ಖಂಡನಾರ್ಹ ಎಂದು ಅವರು ಹೇಳಿದರು.

300x250 AD

ಬಿಟ್ರಿಷರು ನಿರ್ಮಿಸಿದ ರಸ್ತೆ:
 ಸಿದ್ಧಾಪುರ ತಾಲೂಕಿನ ನಿಲ್ಕುಂದ, ತಂಡಾಗು0ಡಿ, ಹೆಗ್ಗರಣೆ, ಜಾನ್ಮನೆ ಕೆಲವು ಭಾಗದವರಿಗೆ ಕೇವಲ 26-28 ಕೀ.ಮಿ ಅಂತರದಲ್ಲಿ ಕುಮಟಕ್ಕೆ ತಲುಪಲು ಅವಕಾಶವನ್ನು ಬ್ರಿಟಿಷ್ ಕಾಲದಲ್ಲಿ ರಸ್ತೆ ನಿರ್ಮಿಸಿದ್ದು, ಸರಕಾರದ ನಿರ್ವಹಣೆಯಿಂದ ಸಂಪೂರ್ಣ ಹದಗೆಟ್ಟಿರುವುದರಿಂದ, ಈ ಭಾಗದವರು 55-60 ಕೀಮಿ ದೂರ ಪ್ರಯಾಣಿಸಿ ಕುಮಟಕ್ಕೆ ತಲುಪುವ  ಪ್ರಯಾಸ ಮಾಡಬೇಕಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.

Share This
300x250 AD
300x250 AD
300x250 AD
Back to top