ಕುಮಟಾ: ತಾಲೂಕಿನ ಮೂರೂರಿನ ಕೆರಗಜನಿಯ ಪರಮೇಶ್ವರ ಪಾರಂಪರಿಕ ನಾಟಿ ಔಷಧಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಧನ್ವಂತರಿ ಮಹಾಯಾಗ ಸಂಪನ್ನಗೊಂಡಿತು.
ಭಗವಾನ್ ಸದ್ಗುರು ಶ್ರೀಧರರ ಅನುಗ್ರಹದೊಂದಿಗೆ ದಿ. ಶ್ರೀ ಪರಮೇಶ್ವರ ಪಾರಂಪರಿಕ ವೈದ್ಯರ ಆಶೀರ್ವಾದದೊಂದಿಗೆ ಶ್ರೀಕ್ಷೇತ್ರ ಭಂಡೂರೇಶ್ವರಿ ದೇವಾಲಯದ ಧರ್ಮದರ್ಶಿ ಪ್ರಶಾಂತ ಭಂಡೂರು ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಧನ್ವಂತರಿ ಮಹಾಯಾಗವು ಮಾ.26ರ ಸಂಜೆ 6 ಗಂಟೆಗೆ ಪ್ರಾರಂಭಗೊಂಡು ಮಾ.27ರಂದು ಪೂರ್ಣಾಹುತಿಯೊಂದಿಗೆ ಮಹಾಯಾಗ ಸಂಪ್ನಗೊಂಡಿತು. ಬಳಿಕ ಧನ್ವಂತರಿ ನಿಧಿ ಕುಂಭ ಸ್ಥಾಪನೆ ಮತ್ತು ಮಹಾ ಪ್ರಸಾದ ವಿತರಣೆ ನಡೆಯಿತು. ಅಲ್ಲದೇ ಶ್ರೀ ಕ್ಷೇತ್ರ ಭಂಡೂರೇಶ್ವರಿ ದೇವಿಯ ಪಲ್ಲಕ್ಕಿಯು ಪರಮೇಶ್ವರ ಪಾರಂಪರಿಕ ನಾಟಿ ಔಷಧಾಲಯಕ್ಕೆ ಆಗಮಿಸಿ, ಪೂಜೆ ಸ್ವೀಕರಿಸಿತು. ಈ ಸಂದರ್ಭದಲ್ಲಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ವಿತರಿಸಲಾಯಿತು. ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಭೋಜನ ಸವಿದರು.