ಶಿರಸಿ: ಇಲ್ಲಿನ ಎಪಿಎಂಸಿ ಯಾರ್ಡಿನ ಟಿ.ಆರ್.ಸಿ ಸಭಾಭವನದಲ್ಲಿ ಮಾ.29 ಬುಧವಾರ ಬೆಳಿಗ್ಗೆ 10.30ರಿಂದ ಸೆಕೆಂಡರಿ ಅಗ್ರಿಕಲ್ಚರ್ (Secondary Agriculture75%/10 ಲಕ್ಷ ರೂ ಸಹಾಯಧನ),ಪಿ.ಎಮ್.ಎಫ್.ಎಮ್.ಇ (PMFME 50%/15 ಲಕ್ಷ ರೂ ಸಹಾಯಧನ) ಹಾಗೂ ಅಗ್ರಿ ಇನ್ಪ್ರಾಸ್ಟ್ರಕ್ಚರ್ ಫಂಡ್(AIF ಶೇ 3% ಬಡ್ಡಿ ವಿನಾಯಿತಿ) ಯೋಜನೆಗಳ ಮಾಹಿತಿ ಕಾರ್ಯಗಾರವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದೆ.
ಸೆಕೆಂಡರಿ ಅಗ್ರಿಕಲ್ಚರ ಯೋಜನೆಯ ಮಾಹಿತಿಯನ್ನು ಉಪಕೃಷಿ ನಿರ್ದೇಶಕ ಟಿ. ಹೆಚ್, ನಟರಾಜ್ ಹಾಗೂ ಪಿ.ಎಮ್.ಎಫ್.ಎಮ್.ಇ ಮತ್ತು ಅಗ್ರಿ ಇನ್ಪ್ರಾಸ್ಟ್ರಕ್ಚರ್ ಫಂಡ್ ಯೋಜನೆಯ ಮಾಹಿತಿಯನ್ನು ಪಿ.ಎಮ್.ಎಫ್.ಎಮ್.ಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುಜಯ ಭಟ್ ತಿಳಿಸಲಿದ್ದಾರೆ.
ಉತ್ಪನ್ನಗಳ ಪ್ಯಾಕಿಂಗ್, ಲೇಬಲಿಂಗ್ ಮಾನದಂಡ ಮತ್ತು ಲೈಸನ್ಸ್ ಪ್ರಕ್ರಿಯೆ ಮಾಹಿತಿಯನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ, ಸಹಾಯಕ ನಿಯಂತ್ರಕ ರಾಮಚಂದ್ರ ಶರ್ಮಾ, ಮೌಲ್ಯವರ್ಧಿತ ಉತ್ಪನ್ನಗಳಿಗಿರುವ ಬೇಡಿಕೆ ಮತ್ತು ಮಾರುಕಟ್ಟೆ ವ್ವವಸ್ಥೆ ಕುರಿತು ವಿಶ್ವೇಶ್ವರ ಭಟ್ಟ, ಶಿರಸಿ, ಉದ್ಯಮ ಸ್ಥಾಪನೆಗೆ ಬ್ಯಾಂಕನ ನೆರವು ಮತ್ತು ನಿಯಮಗಳನ್ನು ಕೆನರಾ ಬ್ಯಾಂಕ್, ದೇವಿಕೆರೆ ಶಾಖೆ ಮ್ಯಾನೆಜರ್ ಮನೋಜ ನಾಯ್ಕ್ ವಿವರಿಸಲಿದ್ದಾರೆ.
ಈ ಎಲ್ಲ ಯೋಜನೆಗಳನ್ನು ವೈಯಕ್ತಿಕ ರೈತರು, ರೈತ ಉತ್ಪಾದಕ ಕಂಪನಿ, ಕೃಷಿ ಉದ್ಯಮಿಗಳು, ಸ್ವ ಸಹಾಯ ಗುಂಪು, ವಿವಿಧೋಧ್ದೇಶ ಸಹಕಾರಿ ಸಂಘಗಳು, ಸಹಕಾರಿ ಸಂಸ್ಥೆ, ಖಾಸಗಿ ಸಂಸ್ಥೆ, ಇತರೆ ಸಂಸ್ಥೆಗಳು ಲಾಭ ಪಡೆಯಬಹುದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಜನೆಯ ಲಾಭ ಪಡೆಯಲು ಕೋರಲಾಗಿದೆ.