ಸಿದ್ದಾಪುರ: ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಿ, ಸಂಚಾರಿ ನಿಯಮವನ್ನು ಪಾಲಿಸಿರಿ ಎನ್ನುವ ವಿಷಯದ ಕುರಿತು ದ್ವಿಚಕ್ರ ವಾಹನ ಸವಾರರಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹೆಲ್ಮೆಟ್ ಬಗ್ಗೆ ಸ್ಪೆಷಲ್ ಡ್ರೈವ್ ಮತ್ತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪಿ.ಐ ಕುಮಾರ ಕೆ. ಮಾತನಾಡಿ, ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಜಾಗೃತಿ ಮೂಡಿಸುವ ಜೊತೆಗೆ ದಂಡವನ್ನು ಸಹ ವಿಧಿಸಲಾಗುವುದು. ಶಾಲಾ ಕಾಲೇಜು ಮುಖ್ಯಸ್ಥರು ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಬಗ್ಗೆ ನಿಗಾವಣೆ ಮಾಡಿ ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ಪಾಲನೆ ಬಗ್ಗೆ ತಿಳಿಸಿಕೊಡಬೇಕು. ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷದಲ್ಲಿ 25 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಹೆಲ್ಮೆಟ್ ಇಲ್ಲದೆ ಮೃತಪಟ್ಟವರ ಸಂಖ್ಯೆ 13 ಆಗಿರುತ್ತದೆ. ಒಂದು ವೇಳೆ ಅಪಘಾತದಲ್ಲಿ ಕೈ ಅಥವಾ ಕಾಲು ಉನವಾದಲ್ಲಿ ಬದುಕಿರಬಹುದು. ಆದರೆ ತಲೆಗೆ ಪೆಟ್ಟಾಗಿ ಸಾವನ್ನಪ್ಪಿದರೆ ಅವರ ನಂಬಿಕೊoಡಿರುವ ಕುಟುಂಬ ಬೀದಿಗೆ ಬೀಳುತ್ತದೆ ಎಂದರು.
ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ 37 ಬೈಕುಗಳಿಗೆ ದಂಡವನ್ನು ಸಹ ವಿಧಿಸಲಾಗಿರುತ್ತದೆ. ಸಾರ್ವಜನಿಕರು ಪೊಲೀಸರ ಒತ್ತಾಯಕ್ಕು ಅಥವಾ ದಂಡ ಹಾಕುತ್ತಾರೆ ಎಂಬ ಭಯಕೋ ಹೆಲ್ಮೆಟ್ ಧರಿಸದೆ ತಮ್ಮ ಜೀವ ರಕ್ಷಣೆಗಾಗಿ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಿ. ನಿಮ್ಮ ಅಮೂಲ್ಯವಾದ ಜೀವ ಹಾಗೂ ನಿಮ್ಮನ್ನು ನಂಬಿಕೊoಡಿರುವ ಕುಟುಂಬವನ್ನು ರಕ್ಷಿಸಬೇಕಾಗಿ ವಿನಂತಿಸಿಕೊoಡರು. ಪಿಎಸೈ ಎಂ.ಜಿ.ಕುoಬಾರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.