ದಾಂಡೇಲಿ: ತಾಲ್ಲೂಕಿನ ಅಂಬೇವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನವಗ್ರಾಮದಲ್ಲಿ ಆನೆಯೊಂದು ಶನಿವಾರ ಸಂಜೆ 5 ಗಂಟೆಗೆ ಕಾಣಿಸಿಕೊಂಡು ಸ್ಥಳೀಯ ಜನತೆಯಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ನವಗ್ರಾಮದಲ್ಲಿ ಜನವಸತಿ ಪ್ರದೇಶದ ಹತ್ತಿರದಲ್ಲಿರುವ ಹೊಲಕ್ಕೆ ಬಂದಿದ್ದ ಆನೆ ಹೊಲದಲ್ಲಿದ್ದ ಕೃಷಿ ಬೆಳೆಗಳನ್ನು ನಾಶಪಡಿಸಿದೆ. ಈ ಸಂದರ್ಭದಲ್ಲಿ ಭಯಭೀತರಾದ ಸ್ಥಳೀಯರು ತಕ್ಷಣವೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಿದರು. ಸ್ಥಳಕ್ಕೆ ಬಂದ ಅರಣ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮದೇ ಆದ ರೀತಿಯಲ್ಲಿ ದೊಡ್ಡ ಶಬ್ದದ ಮೂಲಕ ಆನೆಯನ್ನು ಓಡಿಸುವಲ್ಲಿ ಸಫಲರಾಗಿದ್ದಾರೆ. ಒಟ್ಟಿನಲ್ಲಿ ಆನೆ ಇದೀಗ ಕಾಡು ಸೇರಿದೆ, ಮತ್ತೇ ಯಾವಾಗ ದಾಳಿ ಮಾಡಬಹುದೆನ್ನುವ ಆತಂಕ ಸ್ಥಳೀಯ ಜನತೆಯಲ್ಲಿದೆ.