Slide
Slide
Slide
previous arrow
next arrow

ಶಾಸಕಿ ರೂಪಾಲಿ ಪ್ರಯತ್ನಕ್ಕೆ ಸರ್ಕಾರ ಅಸ್ತು: ಕಾರವಾರ ಕ್ಷೇತ್ರಕ್ಕೆ 2500 ಮನೆಗಳ ಮಂಜೂರಿ

300x250 AD

ಕಾರವಾರ: ಶಾಸಕಿ ರೂಪಾಲಿ ಎಸ್.ನಾಯ್ಕ ಅವರ ಪ್ರಯತ್ನದ ಫಲವಾಗಿ ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ (ಗ್ರಾಮೀಣ)ಅಡಿಯಲ್ಲಿ 2022-23ನೇ ಸಾಲಿನ ಗುರಿಯಲ್ಲಿ ಒಟ್ಟೂ 2500 ಮನೆಗಳು ಮಂಜೂರಿಯಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಮನೆಗಳು ಮಂಜೂರಿ ಆಗಿರುವುದು ಗಮನಾರ್ಹವಾಗಿದೆ.
ಬಸವ ವಸತಿ ಯೋಜನೆಯಲ್ಲಿ ಸಾಮಾನ್ಯ ವರ್ಗಕ್ಕೆ 1647, ಅಲ್ಪಸಂಖ್ಯಾತರಿಗೆ 250 ಸೇರಿ ಒಟ್ಟೂ 1897ಮನೆಗಳು ಮಂಜೂರಾಗಿದ್ದರೆ, ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆ (ಗ್ರಾಮೀಣ)ಯಲ್ಲಿ ಪರಿಶಿಷ್ಟ ಜಾತಿಗೆ 429, ಪರಿಶಿಷ್ಟ ಪಂಗಡಕ್ಕೆ 174 ಸೇರಿ ಒಟ್ಟೂ 603 ಮನೆಗಳು ಮಂಜೂರಾಗಿವೆ. ಈ ಎರಡೂ ಯೋಜನೆಗಳಿಂದ ಕ್ಷೇತ್ರಕ್ಕೆ 2500 ಮನೆಗಳು ಮಂಜೂರಿಯಾಗಿವೆ. ಈ ಬಗ್ಗೆ ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಪ್ರತಿಯೊಂದು ಗ್ರಾಮ ಪಂಚಾಯತ್‌ಗೆ 5-10 ಮನೆಗಳು ಮಂಜೂರಾಗುತ್ತಿದ್ದವು. ಆದರೆ ಈ ಬಾರಿ ಅತಿ ಹೆಚ್ಚು ಮನೆಗಳು ಮಂಜೂರಾಗಿವೆ. ಇದರಿಂದ ಮನೆ ನಿರ್ಮಾಣಕ್ಕೆ ವರದಾನವಾದಂತಾಗಿದೆ.

ಮನೆ ಮಂಜೂರಾತಿ ವಿವರ…
ಅಮದಳ್ಳಿ 67, ತೊಡೂರು 47 , ಚೆಂಡಿಯಾ 90 , ಶಿರವಾಡ 112, ಕಡವಾಡ 72 , ಕಿನ್ನರ 35 , ವೈಲವಾಡ 30, ದೇವಳಮಕ್ಕಿ 55, ಕೆರವಡಿ 23, ಮಲ್ಲಾಪುರ 100 , ಕದ್ರಾ 106, ಗೋಟೆಗಾಳಿ 47, ಹಣಕೋಣ 57 , ಘಾಡಸಾಯಿ 63, ಅಸ್ನೋಟಿ 24, ಮುಡಗೇರಿ 53, ಮಾಜಾಳಿ 51, ಚಿತ್ತಾಕುಲ 133, ಸುಂಕಸಾಳ 77, ಡೋಂಗ್ರಿ 113, ಅಚವೆ 75, ಹಿಲ್ಲೂರು 65, ಮೊಗಟಾ 55, ಬೆಳಸೆ 42, ವಾಸರಕುದ್ರಗಿ 52, ಅಗಸೂರ 62, ಅಗ್ರಗೋಣ 65, ಸಗಡಗೇರಿ 61, ಶೆಟಗೇರಿ 83, ವಂದಿಗೆ 67, ಬೊಬ್ರುವಾಡ 48, ಬೆಳಂಬರ 45, ಹೊನ್ನೆಬೈಲ 56, ಹಾರವಾಡ 56, ಅವರ್ಸಾ 60, ಹಟ್ಟಿಕೇರಿ 55, ಬೆಲೇಕೇರಿ 53, ಭಾವಿಕೇರಿ 75, ಅಲಗೇರಿ 70 ಮನೆಗಳು ಸೇರಿ ಒಟ್ಟೂ 2500 ಮನೆಗಳು ಮಂಜೂರಾಗಿವೆ.

300x250 AD
Share This
300x250 AD
300x250 AD
300x250 AD
Back to top