ಸಿದ್ದಾಪುರ: ಲಯನ್ಸ್ ಬಾಲಭವನದಲ್ಲಿ ಮಾ.4ರಿಂದ 10ರವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ, ಸಂಜೆ 4ರಿಂದ 7ರವರೆಗೆ ಎಕ್ಯೂಪ್ರೆಶರ್ ಚಿಕಿತ್ಸಾ ಪದ್ಧತಿಯ ಆರೋಗ್ಯ ಶಿಬಿರ ನಡೆಯಲಿದೆ.
ದೇಹದ ಅಂಗೈ, ಅಂಗಾಲುಗಳಲ್ಲಿನ ಎಕ್ಯೂಪ್ರೆಶರ್ ಬಿಂದುಗಳನ್ನು ಗುರುತಿಸಿ ದೇಹದ ಯಾವುದೇ ಭಾಗದ ನೋವುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಅವಕಾಶವಿದೆ. ಯಾವುದೇ ಔಷಧೋಪಚಾರವಿಲ್ಲದೇ ಎಕ್ಯೂಪ್ರೆಶರ್ ಚಿಕಿತ್ಸಾ ಪದ್ಧತಿಯಿಂದ ದೇಹದ ಅತಿಭಾರ, ಸಕ್ಕರೆ ಕಾಯಿಲೆ, ಅರ್ಧತಲೆನೋವು, ಕೀಲುನೋವು, ಥೈರಾಯಿಡ್, ಸಂಧಿವಾತ, ಪಿತ್ತವಾತ, ಬೆನ್ನುಹುರಿನೋವು, ಬಿ.ಪಿ., ಮೂಲವ್ಯಾಧಿ ಸಮಸ್ಯೆ, ಮೊಣಕಾಲು ನೋವು, ಸ್ತಿçÃಯರ ಸಮಸ್ಯೆಗಳು, ಚರ್ಮ ಸಮಸ್ಯೆಗಳು, ಹಾಸಿಗೆಯಲ್ಲಿ ಮೂತ್ರ ಮಾಡುವಿಕೆ, ಅಪಚನ (ಇನ್‌ಡೈಜೆಶನ್) ಮುಂತಾದ ತೊಂದರೆಗಳಿಗೆ ಚಿಕಿತ್ಸೆ ವ್ಯವಸ್ಥೆ ಇರುತ್ತದೆ.
ಡಾ.ರಾಮಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ್ ವತಿಯಿಂದ ತಜ್ಞ ವೈದ್ಯ ಡಾ.ಮಹೇಶ್ ಎನ್. ಅವರ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ಮೊ.ಸಂ: 9110824363 ಗೆ ಸಂಪರ್ಕಿಸಲು ತಿಳಿಸಿದೆ.