Slide
Slide
Slide
previous arrow
next arrow

ಇತಿಹಾಸದಲ್ಲಿ ಆಗದ ಕಾಮಗಾರಿ ಈಗ ಆಗುತ್ತಿದೆ: ಶಾಸಕಿ ರೂಪಾಲಿ

300x250 AD

ಕಾರವಾರ: ಇತಿಹಾಸದಲ್ಲಿ ಆಗದ ಅಭಿವೃದ್ಧಿ ಕಾಮಗಾರಿಗಳು ಈಗ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಇಂದು ಶಿಲಾನ್ಯಾಸ ನೆರವೇರಿಸಿದ ಕಾಮಗಾರಿಗಳು ಪೂರ್ಣಗೊಂಡಾಗ ನಗರದ ಚಿತ್ರಣವೇ ಬದಲಾಗಲಿದೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ಮುಖ್ಯಮಂತ್ರಿಗಳಿಂದ ಬಂದ ವಿಶೇಷ ಅನುದಾನದಲ್ಲಿ ಕಾರವಾರ ನಗರದ ಅಭಿವೃದ್ಧಿ, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಹಾಗೂ ನಗರದ ಸೌಂದರ್ಯ ವೃದ್ಧಿಗಾಗಿ ಶಾಸಕರು ಆರೂವರೆ ಕೋಟಿ ರೂ. ವೆಚ್ಚದಲ್ಲಿ ನಗರದಾದ್ಯಂತ 23 ಕಡೆಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕಾರವಾರದ ಶಾಸಕರ ಮಾದರಿ ಶಾಲೆ, ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಮಾಲಾದೇವಿ ಕ್ರೀಡಾಂಗಣ, ನೂತನ ಗುರುಭವನ ಸುಸಜ್ಜಿತವಾಗಿ ನಿರ್ಮಾಣವಾಗಲಿದೆ. ಕ್ಷೇತ್ರಾದ್ಯಂತ ರಸ್ತೆ, ಸೇತುವೆ, ಕುಡಿಯುವ ನೀರು, ಅಗತ್ಯ ಯೋಜನೆಗಳನ್ನು ಜಾರಿಗೊಳಿಸಿದ್ದು ಕಾರವಾರ ಅಂಕೋಲಾದ ಚಿತ್ರಣವೇ ಬದಲಾಗಿದೆ. ಬದಲಾಗುತ್ತಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ನಗರಸಭೆಯಲ್ಲಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಮುಖ್ಯಮಂತ್ರಿಗಳ ವಿಶೇಷ ಅನುದಾನವೂ ಸೇರಿದಂತೆ ಇದುವರೆಗೆ ಸುಮಾರು 60 ಕೋಟಿ ರೂ. ಕಾಮಗಾರಿಗಳನ್ನು ಶಾಸಕರು ನಗರ ಪ್ರದೇಶಕ್ಕೆ ತಂದಿದ್ದಾರೆ. ಇದುವರೆಗೆ ಯಾವ ಶಾಸಕರೂ ತರದಷ್ಟು ಅನುದಾನವನ್ನು ಶಾಸಕರಾದ ರೂಪಾಲಿ ಎಸ್.ನಾಯ್ಕ ಅವರು ತಂದಿದ್ದಾರೆ ಎಂದು ಶ್ಲಾಘಿಸಿದರು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ಶಾಸಕರ ಪ್ರಯತ್ನದಿಂದ ನಗರದಲ್ಲಿ ಮೂಲಭೂತ ಸೌಲಭ್ಯ ದೊರೆಯುವಂತಾಗಿದೆ. ನಗರದ ಸೌಂದರ್ಯಕ್ಕೂ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ನಗರಸಭೆ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ನಗರಸಭೆಯ ಆಯಾ ವಾರ್ಡಿನ ಹಾಗೂ ಎಲ್ಲ ಸದಸ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.


ಶಿಲಾನ್ಯಾಸ ನೆರವೇರಿದ ಕಾಮಗಾರಿಗಳು
ಪ್ರಮುಖವಾಗಿ ನಗರದ ದೈವಜ್ಞ ಭವನ ರಸ್ತೆ ಸುಮಾರು ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ಡಿವೈಡರ್ ಅಳವಡಿಕೆಯೊಂದಿಗೆ ಚತುಷ್ಪಥ ರಸ್ತೆಯಾಗಿ ನಿರ್ಮಾಣಗೊಳ್ಳಲಿದೆ. ಶಿವನಾಥ ದೇವಸ್ಥಾನದಿಂದ ಹೆಚ್‌ಪಿಎಸ್ ಸೋನಾರವಾಡ ರಸ್ತೆ ನಿರ್ಮಾಣ, ಸೋನಾರವಾಡಾ ಚಾಮುಂಡೇಶ್ವರಿ ಗಿಂಡಿದೇವಸ್ಥಾನದ ಹತ್ತಿರದಿಂದ ನರಸಿಂಹ ಅಣವೇಕರ ಮನೆಯವರೆಗೆ ರಸ್ತೆ ನಿರ್ಮಾಣ, ಕೃಷ್ಣವಿಲಾಸ ಮನೆಯಿಂದ ಎಲಿಮ್ ಸೆಂಟರ್ ತನಕ ರಸ್ತೆ ನಿರ್ಮಾಣ, ಮಾಲಿನ್ಯ ನಿಯಂತ್ರಣ ಮಂಡಳಿ ಎದುರುಗಡೆ ರಸ್ತೆ ನಿರ್ಮಾಣ, ಹೌಸಿಂಗ್ ಬೋರ್ಡ ಎದುರುಗಡೆಗೆ ಸಿ-1 ರಸ್ತೆ ನಿರ್ಮಾಣ, ರಾಘವೇಂದ್ರ ಮಠ 1 ನೇ ಅಡ್ಡರಸ್ತೆ ಕಾಂಕ್ರಿಟ್ ರಸ್ತೆ ನಿರ್ಮಾಣ, ವಾರ್ಡ ನಂ. 21 ಶಾಲೆವಾಡಾರಸ್ತೆಯ ಬ್ಯಾಂಕ್ ಕಾಲೋನಿ ಕಳಸವಾಡಾ ಮುಂದುಗಡೆ ರಸ್ತೆ ನಿರ್ಮಾಣ, ನಗರಸಭೆ ವಾರ್ಡ ನಂ 21 ಕಳಸವಾಡಾ ಬ್ಯಾಂಕ್ ಕಾಲೋನಿ ರಸ್ತೆಯ ಡಾಂಬರೀಕರಣ, ಮೂಡಂಗಿ ಮನೆಯಿಂದಕೊಯರ್ ಸಾವಂತ ರಸ್ತೆ ನಿರ್ಮಾಣ, ನಗರಸಭೆ ವ್ಯಾಪ್ತಿಯ ಸಕ್ರವಾಡಾ ನಂದಾ ಬಾಂದೇಕರ ಮನೆ ಕಡೆಗೆ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ, ಸಂತೋಷ ಕಾಶಿನಾಥ ನಾಯ್ಕ ಸಾಯಿನಗರದಿಂದ ಹನ್ಮವಾಡಾರಸ್ತೆ ನಿರ್ಮಾಣ, ಕಾರವಾರ ತಾಲೂಕಿನ ಸೂರ್ಯಕಾಂತ ಟಿ.ನಾಯ್ಕ ಮನೆಯಿಂದರಸ್ತೆ ನಿರ್ಮಾಣ,  ಸುಂಕೇರಿ ನಾಗನಾಥ ದೇವಸ್ಥಾನ ಹೋಗುವ ರಸ್ತೆ ನಿರ್ಮಾಣ, ಕಾತ್ಯಾಯನಿ ದೇವಸ್ಥಾನದಿಂದ ಕಿರಣ ಅಣವೇಕರ ಮನೆ ತನಕ ಕಾಂಕ್ರೀಟ್ ರಸ್ತೆ ನಿರ್ಮಾಣ,  ತಾಮಸೆವಾಡಾ ಬ್ರಾಹ್ಮಣಿ ದೇವಸ್ಥಾನದಿಂದ ಉಲ್ಲಾಸ ತಾಮಸೆ ಮನೆ ತನಕ ಸಿಮೆಂಟ ರಸ್ತೆ, ಕಾಂಚನಾ ಅಶೋಕ ಸಿಗಡೇಕರ ಮನೆಯಿಂದ ಬಾಡಕರ ಮನೆ ತನಕ ರಸ್ತೆ ನಿರ್ಮಾಣ, ದೇವಳಿವಾಡಾ ಸಂಜಯ ಬಾಡಕರ ಮನೆಯ ಮುಂದಿನ ಮುಖ್ಯರಸ್ತೆ ಹುಲಿಗಪ್ಪಗಡವಿ ರಸ್ತೆ ನಿರ್ಮಾಣ, ದೇವಳಿವಾಡಾ ವಸಂತನಗರ ರಸ್ತೆ ನಿರ್ಮಾಣ, ಪೊಲೀಸ್ ಹೆಡ್‌ಕ್ವಾರ್ಟಸ್ ಸಿಮೆಂಟ್ ರಸ್ತೆ ನಿರ್ಮಾಣ, ಆಶಾನಿಕೇತನ ಶಾಲೆಯಿಂದ ಗುನಗಿ ಮನೆವರೆಗೆ ಚರಂಡಿ ಮೇಲೆ ಸ್ಟ್ರಾಬ್ ಹಾಕುವುದು. ಪಿಕಳೆ ರಸ್ತೆ ಸಿಮೆಂಟ್ ರಸ್ತೆ ಎರಡೂ ದಿಕ್ಕಿನಲ್ಲಿ ಗಟಾರಿನ ತನಕ ದಾಂಬರೀಕರಣ, ದೈವಜ್ಞ ಹಾಲ್ ನಿಂದ ಕಲಾವತಿ ದೇವಸ್ಥಾನ, ಧೋಬಿಘಾಟ ರಸ್ತೆಯ ವರೆಗೆ ಡಾಂಬರೀಕರಣ, ದೋಬಿಘಾಟ ರಸ್ತೆಯ ರುದ್ರಭೂಮಿಗೆ ಹೋಗುವ ರಸ್ತೆಗೆ ಚರಂಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. 

300x250 AD
Share This
300x250 AD
300x250 AD
300x250 AD
Back to top