ಕುಮಟಾ: ತಾಲೂಕಿನ ಉಪ್ಪಿನಪಟ್ಟಣದ ಹೆಬೈಲ್ನಲ್ಲಿ ನೆಲೆಸಿರುವ ಶ್ರೀಲಕ್ಷ್ಮೀ ನಾರಾಯಣ ದೇವರ ನೂತನ ಶಿಲಾಮಯ ದೇವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.
ಶ್ರೀಲಕ್ಷ್ಮೀನಾರಾಯಣ ದೇವರ ನೂತನ ಶಿಲಾಮಯ ದೇವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಫೆ.13ರಿಂದ ಆರಂಭಗೊಂಡಿದ್ದು, ವೈದಿಕರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಸಾಂಗವಾಗಿ ನೆರವೇರಿದವು.
ನೂತನ ಶಿಲಾಮಯ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ಆಗಮಿಸಿದ ಕನ್ಯಾಡಿಯ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯರನ್ನು ಪೂರ್ಣ ಕುಂಭದ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಯಿತು. ಶ್ರೀಗಳು ನೂತನ ಶಿಲಾಮಯ ದೇವಸ್ಥಾನದ ಕಲಶಸ್ಥಾಪನೆ ಕಾರ್ಯವನ್ನು ನೆರವೇರಿಸಿದರು. ಬಳಿಕ ನವಕುಂಡಗಳಲ್ಲಿ ಹೋಮ, ಬ್ರಹ್ಮಕಲಾಶಾಭಿಷೇಕ, ಶ್ರೀಸೂಕ್ತ, ಪುರುಷಸೂಕ್ತ ಹೋಮಗಳು, ಅವಬೃಥ ವಿಧಾನಗಳು, ಜಯಾದಿ ಪ್ರಾಯಶ್ಚಿತ್ತ ಶಾಂತಿ ಹೋಮಗಳು, ಮಹಾಪೂರ್ಣಾಹುತಿ ಸಂಪನ್ನಗೊಂಡಿತು. ಬಳಿಕ ಆಶೀರ್ವಚನ ನೀಡಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಶಿಲಾಮಯ ದೇವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡಿದೆ. ಐದು ದಿನಗಳು ಅದ್ಧೂರಿಯಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಧರ್ಮ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ. ಇದೇ ರೀತಿ ಸನಾತನ ಹಿಂದೂ ಧರ್ಮದ ಧಾರ್ಮಿಕ ಕಾರ್ಯಗಳು ನಾಡಿನಾದ್ಯಂತ ನಡೆಯಲಿ ಎಂದು ಶ್ರೀರಾಮನಲ್ಲಿ ಪ್ರಾರ್ಥಿಸುತ್ತ, ಭಕ್ತ ಕೋಟಿಗೆ ಸನ್ಮಂಗಲವನ್ನುಂಟು ಮಾಡಲಿ ಎಂದು ಆಶೀರ್ವದಿಸಿದರು.
ಬಳಿಕ ಶ್ರೀಗಳು ಸಾವಿರಾರು ಭಕ್ತರಿಗೆ ಮಂತ್ರಾಕ್ಷತೆ ನೀಡಿ ಹರಸಿದರು. ಶ್ರೀ ಲಕ್ಷಿö್ಮÃನಾರಾಯಣ ದೇವನಿಗೆ ಮಹಾ ಮಂಗಳಾರತಿ ಪೂಜೆ ನೆರವೇರಿದ ಬಳಿಕ ತೀರ್ಥ-ಪ್ರಸಾದ ವಿತರಣೆ ಮಾಡಲಾಯಿತು. ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಕೃತಾರ್ಥರಾದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಶ್ರೀನಂದ ಷಡಕ್ಷರಿ, ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ, ಸಂಘದ ಪದಾಧಿಕಾರಿಗಳು, ವಕೀಲ ಆರ್ ಜಿ ನಾಯ್ಕ, ಉದ್ಯಮಿ ಎಚ್ ಆರ್ ನಾಯ್ಕ ಕೋನಳ್ಳಿ, ಪ್ರಮುಖರಾದ ರತ್ನಾಕರ ನಾಯ್ಕ, ಮಂಜುನಾಥ ಎಲ್ ನಾಯ್ಕ, ಪ್ರಶಾಂತ ನಾಯ್ಕ, ರಾಜು ನಾಯ್ಕ ಮಾಸ್ತಿಹಳ್ಳ, ವಿಶ್ವನಾಥ ನಾಯ್ಕ, ದೇವಸ್ಥಾನ ಕಟ್ಟಡ ಸಮಿತಿ ಅಧ್ಯಕ್ಷರಾದ ಉದಯ ನಾಗಪ್ಪ ನಾಯ್ಕ, ಉಪಾಧ್ಯಕ್ಷ ಮಹಾಬಲೇಶ್ವರ ತಿಮ್ಮಪ್ಪ ನಾಯ್ಕ, ಕಾರ್ಯದರ್ಶಿ ವಿನಾಯಕ ಮಂಜಪ್ಪ ನಾಯ್ಕ, ಖಜಾಂಚಿ ನಾರಾಯಣ ಗಣಪು ನಾಯ್ಕ, ಸದಸ್ಯರಾದ ಜಟ್ಟಿ ಬಲಿಯಪ್ಪ ನಾಯ್ಕ, ಮೊಕ್ತೇಸರರಾದ ಗೋವಿಂದ ಪರಮೇಶ್ವರ ನಾಯ್ಕ, ಶೇಖರ ರಾಮ ನಾಯ್ಕ, ನಾಗೇಶ ಗೋವಿಂದ ನಾಯ್ಕ, ಮಂಜುನಾಥ ಪರಮೇಶ್ವರ ನಾಯ್ಕ, ಮತ್ತು ಹತ್ತು ಮಂದಿಯ ಸರ್ವ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
***