ದಾಂಡೇಲಿ: ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಗೆ ಬರುವ ಟ್ರಕ್‌ಗಳಿಗೆ ಹಾಗೂ ಕಾಗದ ಕಾರ್ಖಾನೆಗೆ ಬರುವಂತಹ ಟ್ರಕ್‌ಗಳನ್ನು ಕಾರ್ಖಾನೆಯೊಳಗಡೆ ಸಂಬಂಧಪಟ್ಟ ಯಾರ್ಡ್ ವರೆಗೆ ಕೊಂಡು ಹೋಗಲು ಮೊದಲ ಆದ್ಯತೆಯಲ್ಲಿ ದಾಂಡೇಲಿಯಲ್ಲಿ ಕೆಲಸವಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಚಾಲಕರುಗಳಿಗೆ ಉದ್ಯೋಗ ನೀಡಬೇಕೆಂದು ಶ್ರೀದಾಂಡೇಲಪ್ಪ ಬೃಹತ್ ವಾಹನ ಚಾಲಕರ ಸಂಘದ ಅಧ್ಯಕ್ಷ ರಮೇಶ್ ಭಂಡಾರಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಟ್ರಕ್ ಚಾಲನೆ ಮಾಡಿ ಬದುಕು ಕಟ್ಟಿಕೊಂಡಿರುವ ನಮಗೆ ಇದೀಗ ಇತ್ತೀಚಿನ ಕೆಲ ತಿಂಗಳುಗಳಿಂದ ಕೆಲಸವಿಲ್ಲದೇ ತೀವ್ರ ಸಂಕಷ್ಟ ಎದುರಾಗಿದೆ. ಟ್ರಕ್ ಚಾಲನೆ ಮಾಡಿ ಸಾಲ-ಸೋಲ ಮಾಡಿಕೊಂಡು ಮನೆ-ಮಠ ಕಟ್ಟಿಕೊಂಡು, ಮಕ್ಕಳಿಗೆ ಶಿಕ್ಷಣ ಕೊಡುತ್ತಿದ್ದ ನಮಗೆ ಇದೀಗ ಕೆಲಸವಿಲ್ಲದೇ ವಿಲವಿಲ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಾಡಿದ ಸಾಲಕ ಕಂತು ಪಾವತಿಸಲಾಗದೆ, ಇತ್ತ ಸಂಸಾರದ ನಿರ್ವಹಣೆಯನ್ನು ಮಾಡಲು ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀದಾಂಡೇಲಪ್ಪ ಬೃಹತ್ ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಶೇರಿಪ್ ಸಾಕ್ಲಿ, ಕಾರ್ಯದರ್ಶಿ ಮಝರ್ ಖುರೇಶಿ ಹಾಗೂ ಪ್ರಮುಖರುಗಳಾದ ನಾಗೇಂದ್ರ ಮಠದ, ಪರಶುರಾಮ, ಮಹಮ್ಮದ್, ಖಾಜಾಸಾಬ್, ಮಹಮ್ಮದ್ ಯಾಕೂಬ್, ಕುಮಾರ್, ನಿಸಾರ್ ಮೊದಲಾದವರು ಇದ್ದರು.