ಅಂಕೋಲಾ: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ತಾಲೂಕಿನ ಹಾರವಾಡ ಕಡಲತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕಾರವಾರ ತಾಲ್ಲೂಕಿನ ಚಿತ್ತಾಕುಲ ಮೂಲದ ವಾಸು ಹರಿಕಾಂತ್ (45) ಮೃತ ಮೀನುಗಾರ. ನಿನ್ನೆ ಸಮುದ್ರ ತೀರದ ಬಳಿ ಮೀನು ಹಿಡಿಯಲು ತೆರಳಿದ್ದ ವಾಸು, ಕಣ್ಮರೆಯಾಗಿದ್ದ. ಆದರೆ ಶವವಾಗಿ ಪತ್ತೆಯಾಗಿದ್ದು, ಮೀನುಗಾರಿಕೆಗೆ ತೆರಳಿದ್ದ ವೇಳೆ ಆಯತಪ್ಪಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.