ದಾಂಡೇಲಿ: ಅತ್ಯಂತ ಕುತೂಹಲ, ರಣರೋಚಕವಾಗಿ ನಗರದ ಡಿ.ಎಫ್.ಎ ಮೈದಾನದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಮೂರನೇ ದಿನವೂ ಯಶಸ್ವಿಯಾಗಿ ನಡೆಯಿತು.
ಡೈನಮಿಕ್ ಪರ್ಸನಾಲಿಟಿಯ ಅನಿಲ್ ಪಾಟ್ನೇಕರ್ ಅವರ ಸಮರ್ಥ ನೇತೃತ್ವ ಹಾಗೂ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಅಧ್ಯಕ್ಷರಾದ ವಿಷ್ಣುಮೂರ್ತಿ ರಾವ್, ಸಮಿತಿಯ ಪದಾಧಿಕಾರಿಗಳಾದ ಸಚಿನ್ ಕಾಮತ್, ಇಮಾಮ್ ಸರ್ವರ್, ರಮೇಶ್ ನಾಯ್ಕ, ಶಮಲ್ ಅಬ್ದುಲ್ಲಾ, ನಿತಿನ್ ಕಾಮತ್, ಮನೋಹರ್ ಕದಂ, ಕುಲದೀಪ್ ಸಿಂಗ್ ರಜಪೂತ್, ನರಸಿಂಗ್ ದಾಸ್ ರಾಠಿ, ಅತುಲ್ ಮಾಡ್ದೋಳ್ಕರ್, ಸಂದೀಪ್ ರಜಪೂತ್, ಸೈಯದ್ ವಸೀಂ ಅಂಕೋಲೆಕರ್ ಮತ್ತು ಜೋಸೆಪ್ ಗೋನ್ಸಾಲಿಸ್ ಮೊದಲಾದವರ ತಂಡ ಕುಂದುಕೊರತೆಗಳಿಲ್ಲದೆ ಅದ್ಭುತ ರೀತಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಿ ಗಮನ ಸೆಳೆದಿದ್ದಾರೆ. ಕ್ರಿಕೆಟ್ ಅಕಾಡೆಮಿ ವತಿಯಿಂದ ಆಯೋಜಿಸಿದ ರೀತಿಯಲ್ಲಿ ಪಂದ್ಯಾವಳಿಯನ್ನು ಶಿಸ್ತುಬದ್ಧವಾಗಿ ಸಂಘಟಿಸಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇಂದಿನ ಲೀಗ್ ಪಂದ್ಯಾವಳಿಯಲ್ಲಿ ದಾಂಡೇಲಿ ಟಸ್ರ್ ಮತ್ತು ಸ್ಟಾರ್ಲಿಂಗ್ ರಾಯಲ್ಸ್ ನಡುವೆ, ಕುಳಗಿ ಲೆಜೆಂಡ್ಸ್ ಮತ್ತು ಕಾಳಿ ಟೈರ್ಸ್ ನಡುವೆ, ದಾಂಡೇಲಿ ಡ್ರೀಮ್ಸ್ ಮತ್ತು ಡ್ಯೂಡ್ರಾಪ್ಸ್ ಥಂರ್ಸ್ ನಡುವೆ, ಕಿಂಗ್ಸ್ ಇಲೆವನ್ ಮತ್ತು ದಾಂಡೇಲಿ ಜಂಗಲ್ ವಿಲ್ಲಾ ವಾರಿರ್ಸ್ ತಂಡಗಳ ನಡುವೆ ಪಂದ್ಯಾಟಗಳು ನಡೆಯಲಿದೆ. ಇನ್ನೂ ಪಂದ್ಯಾವಳಿಯ ನೇರಪ್ರಸಾರವನ್ನು ಬೆಳಗಾವಿಯ ಐಟಿಸಿ ಸ್ಪೋಟ್ಸ್ ಲೈವ್ ಯೂಟೂಬ್ ಚಾಲೆನ್ ಪ್ರಸಾರ ಮಾಡುತ್ತಿದೆ. ಒಟ್ಟಿನಲ್ಲಿ ಡಿಪಿಎಲ್ಗೆ ಡಿಪಿಎಲ್ ಪಂದ್ಯಾವಳಿಗೆ ಸಾಟಿ ಎಂಬಂತೆ ಪಂದ್ಯಾವಳಿ ಮುಂದುವರಿದೆ.