ಶಿರಸಿ: ಜಿಲ್ಲಾ ಕಾಂಗ್ರೆಸ್ ನಾಯಕ, ಉದ್ಯಮಿ ಭೀಮಣ್ಣ ಟಿ.ನಾಯ್ಕ ಅವರ ಏಕೈಕ ಪುತ್ರ ಅಶ್ವಿನ್ ಅವರ ವಿವಾಹ ಮಹೋತ್ಸವವು ಫೆ.12ರಂದು ತಾಲೂಕಿನ ಮಳಲಗಾಂವ್ ಗ್ರಾಮದಲ್ಲಿ ನಡೆಯಲಿದ್ದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಮದುವೆಗೆ ಸುಮಾರು 30 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದ್ದು, ಮದುವೆಗೆ ಬರುವ ಜನರಿಗಾಗಿ ಆತಿಥ್ಯ ನೀಡಲು ನಗರದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಹಿಂಭಾಗದ ಇಡೀ ಮೈದಾನವನ್ನೇ ರಿಸೆಪ್ಷನ್ಗಾಗಿ ಸಜ್ಜು ಮಾಡಿದ್ದಾರೆ. ಪಾರ್ಕಿಂಗ್ ವ್ಯವಸ್ಥೆಗಾಗಿ ಶ್ರೀಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಹೊರ ಭಾಗದ ಸಂಪೂರ್ಣ ಜಾಗವನ್ನು ಕಾಯ್ದಿರಿಸಲಾಗಿದೆ.
ಬೆಳಿಗ್ಗೆ ಮಳಲಗಾಂವನಲ್ಲಿ ಮದುವೆ ನಡೆಯಲಿದ್ದು, ಸಂಜೆ ಆರು ಗಂಟೆಯಿಂದ ಎಂಇಎಸ್ ಕಾಲೇಜು ಮೈದಾನದಲ್ಕಿ ರಿಸೆಪ್ಷನ್ ನಡೆಯಲಿದೆ. ಮಳಲಗಾಂವನಲ್ಲಿ ನಡೆಯುವ ಮದುವೆ ಮಂಟಪವನ್ನು ಕೂಡಾ ಅತ್ಯಂತ ವಿಜ್ರಂಭಣೆಯಿಂದ ವೈಭವೀಕರಿಸಲಾಗಿದೆ. ಇಲ್ಲಿಯೂ ಕೂಡಾ ಸಾವಿರಾರು ಜನರು ಊಟಕ್ಕೆ ಬರುವ ನೀರೀಕ್ಷೆ ಹೊಂದಿದ್ದರಿಂದ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಮೈಸೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿನ ಪರಿಣಿತಿ ಹೊಂದಿದ ಬಾಣಸಿಗರನ್ನು ಅಡುಗೆ ತಯಾರಿಗಾಗಿ ಕರೆಸಲಾಗಿದೆ. ಬೆಂಗಳೂರಿನ ಅತ್ಯಂತ ಪ್ರಸಿದ್ಧವಾದ ವೇದಿಕೆ ತಯಾರಿಕರಿಂದ ಮದುವೆ ಮಂಟಪವನ್ನು ತಯಾರಿಸಲಾಗುತ್ತಿದೆ.
ರಿಸೆಪ್ಷನ್ನಲ್ಲಿ ಮೂವತ್ತೂ ಸಾವಿರಕ್ಕೂ ಹೆಚ್ಚಿನ ಜನರಿಗೆ ವೆಜ್ ಊಟವನ್ನು ವ್ಯವಸ್ಥಿತವಾಗಿ ನೀಡಲು 75 ಕೌಂಟರ್ಗಳನ್ನು ಮಾಡಲಾಗಿದೆ. ಅಲ್ಲಲ್ಲಿಯೇ ಕೈ ತೊಳೆಯುವ ವ್ಯವಸ್ಥೆ ಮಾಡಲಾಗಿದೆ. ಯಾರಿಗೂ ಕೂಡಾ ಒಂದಿನಿತು ತೊಂದರೆಯಾಗದ ರೀತಿಯಲ್ಲಿ ಶೌಚಾಲಯ, ಮೂತ್ರಖಾನೆ ವ್ಯವಸ್ಥೆ ಕೂಡಾ ಮಾಡಲಾಗಿದೆ. ತಮ್ಮ ಒಡೆತನದ ಹೋಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್ ಮುಂಬೈನ ವಿದ್ಯುತ್ ಗುತ್ತಿಗೆದಾರರಿಂದ ಶೃಂಗರಿಸಿದ್ದು, ನೋಡುಗರ ಕಣ್ಣಿಗೆ ಹಬ್ಬದ ರಸದೂತಣ ಬಡಿಸುತ್ತಿದೆ.
ಮದುವೆಗೆ ಶಿವಣ್ಣ…
ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ಕೆ.ಹರಿಪ್ರಸಾದ್ ಹೀಗೆ ರಾಜಕೀಯ ಗಣ್ಯರ ತಂಡವೇ ಹರಿದು ಬರುವ ನಿರೀಕ್ಷೆಯಿದೆ. ಶಿವಣ್ಣ ಮದುವೆಗೂ ಮುನ್ನವೇಶಿರಸಿಗೆ ಬಂದು ತಮ್ಮ ಮಾಮನ ಮನೆಯಾದ ಭೀಮಣ್ಣನವರ ಮನೆಗೆ ಬಂದಿದ್ದು, ಮದುವೆ ಮನೆಯ ಕೇಂದ್ರ ಬಿಂದುವಾಗಲಿದ್ದಾರೆ.