Slide
Slide
Slide
previous arrow
next arrow

ಜಯಘೋಷಗಳೊಂದಿಗೆ ನಡೆದ ಉಳವಿಯ ಮಹಾ ರಥೋತ್ಸವ

300x250 AD

ಜೊಯಿಡಾ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ತಾಲೂಕಿನ ಶ್ರೀಕ್ಷೇತ್ರ ಉಳವಿ ಜಾತ್ರೆ ಜಯಘೋಷಗಳೊಂದಿಗೆ ಸೋಮವಾರ ಸಂಜೆ 4 ಗಂಟೆಗೆ ತೇರನ್ನು ಎಳೆಯುವುದರ ಮೂಲಕ ಅದ್ದೂರಿಯಾಗಿ ರಥೋತ್ಸವ ಸಂಪನ್ನಗೊoಡಿತು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಉಳವಿ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ, ಸಂಜಯ ಕಿತ್ತೂರ, ಉಳವಿ ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ ಮೊಕಾಶಿ ಇನ್ನೂ ಹಲವಾರು ಗಣ್ಯರು ರಥೋತ್ಸವಕ್ಕೆ ಚಾಲನೆಯನ್ನು ನೀಡಿದರು. ಬಸವಣ್ಣನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಬಸವಣ್ಣನ ದರ್ಶನ ಪಡೆದು ಪುನೀತರಾದರು. ಹರಹರ ಮಹಾದೇವ, ಅಡಕೇಶ್ವರ ಮಡಿಕೇಶ್ವರ ಉಳವಿ ಚೆನ್ನ ಬಸವೇಶ್ವರರ ಎನ್ನುತ್ತ ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡರು.

ಮಂಡಕ್ಕಿ ಖಾರ ವಿಶೇಷ: ಉಳವಿ ಜಾತ್ರೆಯಲ್ಲಿ ಮಂಡಕ್ಕಿ ಖಾರ ವಿಶೇಷವಾಗಿ ಕಂಡು ಬಂದಿತು. ಎಲ್ಲಿ ನೋಡಿದರಲ್ಲಿ ಮಂಡಕ್ಕಿ ಖಾರದ ಅಂಗಡಿಗಳು ಕಂಡುಬoದವು. ಇನ್ನುಳಿದಂತೆ ಮಿಠಾಯಿ ಅಂಗಡಿ ಹಾಗೂ ತೆಂಗಿನಕಾಯಿ ಅಂಗಡಿ ಮುಂಗಟ್ಟುಗಳು ಕಂಡುಬoದವು. ಹೊಸ ವಿಶಾಲವಾದ ರಥಬೀದಿ ನಿರ್ಮಾಣವಾದ ಕಾರಣ ಭಕ್ತರಿಗೆ ಮಹಾರಥೋತ್ಸವ ನೋಡಲು ಅನುಕೂಲವಾಯಿತು.

300x250 AD

ಜಾತ್ರೆಗೆ ಈ ಬಾರಿ ಚಕ್ಕಡಿಗಾಡಿಗಳನ್ನು ತರಬಾರದು ಎಂಬ ಆದೇಶವಿದ್ದರು ಬಹಳಷ್ಟು ಚಕ್ಕಡಿಗಾಡಿಗಳು ಜಾತ್ರೆಗೆ ಬಂದಿದ್ದವು. ಎತ್ತುಗಳನ್ನು ಬಸವಣ್ಣನ ತೇರಿನ ದರ್ಶನಕ್ಕೆ ತಂದು ವಿವಿಧ ರೀತಿಯ ಅಲಂಕಾರಗಳನ್ನು ಎತ್ತುಗಳಿಗೆ ಮಾಡಲಾಗಿತ್ತು. ಅರಣ್ಯ ಇಲಾಖೆಯಿಂದ ಬೆತ್ತ ಮಾರಾಟ: ಗುಂದ ಅರಣ್ಯ ಇಲಾಕೆಯಿಂದ ಉಳವಿ ಜಾತ್ರೆಯಲ್ಲಿ ಕಡಿಮೆ ದರದಲ್ಲಿ ರೈತರಿಗೆ, ಉಳವಿ ಜಾತ್ರೆ ಭಕ್ತರಿಗೆ ಬೆತ್ತದ ಕೋಲು ಮಾರಾಟ ಮಾಡಲಾಯಿತು, ಜೋಯಿಡಾ ತಾಲೂಕಿನ ಅಣಶಿ, ಉಳವಿ, ಭಾಗದಲ್ಲಿ ಬೆತ್ತದ ಗಿಡಗಳು ಇದ್ದು ಒಂದು ಬೆತ್ತದ ಕೋಲು ಮನೆಯೊಳಗೆ ಇರಬೇಕು ಎನ್ನುವುದು ಹಿರಿಯರ ಮಾತು. ಬಹಳಷ್ಟು ಜನರು ಬೆತ್ತವನ್ನು ಖರೀದಿಸಿದರು.

ಪೊಲೀಸರಿಂದ ಉತ್ತಮ ವ್ಯವಸ್ಥೆ: ಜಾತ್ರೆಯಲ್ಲಿ ಟ್ರಾಫಿಕ್ ಜಾಮ್ ಆಗದಂತೆ ಡಿವೈಎಸ್‌ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ವರ್ಷ ಜಾತ್ರೆಯಲ್ಲಿ ಟ್ರಾಫಿಕ್ ಜಾಮ್ ಆಗದಂತೆ ಪೊಲೀಸರು ನಿಗಾ ವಹಿಸಿದ್ದರು. ರಥೋತ್ಸವ ನಡೆಯುವ ಸಂದರ್ಭದಲ್ಲಿ ಬಸ್ಸು ಮತ್ತು ಟ್ರಾಕ್ಟರ್‌ನಂತಹ ದೊಡ್ಡ ವಾಹನಗಳನ್ನು ಬಿಡದೆ, ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಂಡರು. ಅರಣ್ಯ ಇಲಾಖೆಯಿಂದಲು ಜಾತ್ರೆಗೆ ಉತ್ತಮ ಸ್ಪಂದನೆ ದೊರೆಯಿತು.

Share This
300x250 AD
300x250 AD
300x250 AD
Back to top