ಅಂಕೋಲಾ: ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ವಿದ್ಯುತ್ ಮಸೂದೆ-22 ನ್ನು ವಿರೋಧಿಸಿ ಅಗಸೂರನಲ್ಲಿ ಗ್ರಾಮ ಪಂಚಾಯತ್ ಮಟ್ಟದ ನೀರಾವರಿ ಪಂಪಸೆಟ್ ರೈತರ ಮತ್ತು ಅರಣ್ಯ ಅತಿಕ್ರಮಣದಾರರ ಸಭೆ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, ವಿದ್ಯುತ್ ಮಸೂದೆ ಜಾರಿಯಾದರೆ ವಿದ್ಯುತ್ ಕ್ಷೇತ್ರ ಸಂಪೂರ್ಣವಾಗಿ ಖಾಸಗಿ ಕಾರ್ಪೊರೇಟ್ ಕಂಪನಿಗಳ ಕೈವಶವಾಗಲಿದ್ದು, ಪ್ರೀಪೇಡ್ ಮೀಟರ್ ಅಳವಡಿಕೆಯಿಂದ ನೀರಾವರಿ ಪಂಪಸೆಟ್‌ಗಳನ್ನು ನಡೆಸಲಾರದ ಪರಿಸ್ಥಿತಿ ಬರಲಿದೆ, ಇದರಿಂದ ರೈತಾಪಿ ಕೃಷಿ ಸಂಪೂರ್ಣ ನಾಶವಾಗಲಿದೆ ಎಂದರು. ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಸರಕಾರದ ಉದಾಸಿನತೆಯನ್ನು ಖಂಡಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶೋಭಾ ಗೌಡ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ನಿರ್ಮಲಾ ನಾಯಕ, ತುಳುಸು ಗೌಡ, ಆನಂದು ಗೌಡ, ಶ್ವೇತಾ ಗೌಡ, ಮಂಜು ಗೌಡ ಮುಂತಾದವರು ಹಾಜರಿದ್ದರು.