ಮೈಸೂರು: ಇಲ್ಲಿನ ಕರಾವಳಿ ಯಕ್ಷಗಾನ ಕೇಂದ್ರದ 12ನೇ ವಾರ್ಷಿಕೋತ್ಸವವನ್ನು ಫೆ.5 ಭಾನುವಾರದಂದು ಮೈಸೂರಿನ ಕುವೆಂಪು ನಗರದ (ಲವ-ಕುಶ ಪಾರ್ಕ್ ಎದುರು) ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದಲ್ಲಿ ಆಯೋಜಿಸಲಾಗಿದೆ.
ಅಪರಾಹ್ನ 3.00 ಗಂಟೆಗೆ ತೆಂಕುತಿಟ್ಟು ವಿದ್ಯಾರ್ಥಿಗಳಿಂದ ‘ಗುರುದಕ್ಷಿಣೆ ಪಾಂಚಜನ್ಯ’ ಯಕ್ಷಗಾನ ಪ್ರದರ್ಶನವು ನಡೆಯಲಿದೆ. ಸಂಜೆ 4.30ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು ಸಭಾಧ್ಯಕ್ಷತೆಯನ್ನು ಕೇಂದ್ರದ ಅಧ್ಯಕ್ಷ ಶ್ರೀಧರ ಐತಾಳ ವಹಿಸಲಿದ್ದು, ಅಭ್ಯಾಗತರಾಗಿ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್, ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಹಾಗೂ ಅಪೋಲೋ ಆಸ್ಪತ್ರೆಯ ಡಾ. ನಾರಾಯಣ ಹೆಗಡೆ ಆಗಮಿಸಲಿದ್ದಾರೆ.
ಸಂಜೆ 5.30ಕ್ಕೆ ಬಡಗುತಿಟ್ಟು ಯಕ್ಷಗಾನ ವಿದ್ಯಾರ್ಥಿಗಳಿಂದ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು ಸರ್ವರಿಗೂ ಸ್ವಾಗತವನ್ನು ಕೋರಲಾಗಿದೆ.