• Slide
    Slide
    Slide
    previous arrow
    next arrow
  • ಸ್ವಸಹಾಯ ಸಂಘಗಳ ಸದಸ್ಯರ ತರಬೇತಿ ಕಾರ್ಯಾಗಾರ ಸಂಪನ್ನ

    300x250 AD

    ದಾಂಡೇಲಿ: ಸ್ಕೋಡ್‌ವೆಸ್ ಸಂಸ್ಥೆಯ ಆಶ್ರಯದಲ್ಲಿ ನಗರದ ನಿರ್ಮಲನಗರದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಗಾರ ಯಶಸ್ವಿಯಾಗಿ ಸಂಪನ್ನಗೊಂಡಿತು.
    ತರಬೇತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಬಸವವಂತಮ್ಮ ನಾಯಕ, ಮಹಿಳಾ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳ ಪಾತ್ರ, ಸ್ವಹಾಯ ಸಂಘಗಳ ಮೂಲಕ ಆರ್ಥಿಕ ಸ್ವಾವಲಂಬನೆ, ನಾಯಕತ್ವ, ಸ್ವ ಉದ್ಯೋಗ ಚಟುವಟಿಕೆಗಳಿಗೆ ಇರುವ ಪೂರಕ ಅವಕಾಶ, ಸ್ವಸಹಾಯಗಳ ಆರ್ಥಿಕ ವ್ಯವಹಾರ, ನಾಯಕತ್ವ ಮೊದಲಾದವ ವಿಚಾರಗಳ ಬಗ್ಗೆ ತರಬೇತಿ ನೀಡಿ, ಸ್ವಸಹಾಯ ಸಂಘಗಳು ಕೇವಲ ಉಳಿತಾಯ ಮತ್ತು ಸಾಲದ ಚಟುವಿಟಕೆಗೆ ಮಾತ್ರವಲ್ಲ. ಬದಲಾಗಿ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶವನ್ನು ಹೊಂದಿದ್ದು, ಈ ಉದ್ದೇಶಗಳು ಈಡೇರಿಕೆಯಾದಾಗ ಸ್ವಸಹಾಯ ಸಂಘಗಳ ಜೊತೆಗೆ ಸಂಘದ ಸದಸ್ಯರು ಪ್ರಗತಿ ಸಾಧಿಸಲು ಸಾಧ್ಯ ಎಂದರು.
    ಸಂಸ್ಥೆಯ ಮೇಲ್ವಿಚಾರಕಿ ಪೂಜಾ ಬಾಲೇಶಗೋಳ ಅವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ಸುಧಾ ನಟೇಶ್ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top