ಅಂಕೋಲಾ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವನದೇವತೆ ತಾಲೂಕಿನ ತುಳಸಿ ಗೌಡ ಇವರ ಕುರಿತಾಗಿ ಬರೆದ ‘ಕಾಡಿನ ತುಳಸಿ’ ಕೃತಿಯು ಜ. 30 ರಂದು ಬೆಳಿಗ್ಗೆ 10.30ಕ್ಕೆ ಹೊನ್ನಳ್ಳಿಯ ತುಳಸಿ ಗೌಡ ಅವರ ಮನೆಯಂಗಳದಲ್ಲಿ ಬಿಡುಗಡೆಗೊಳ್ಳಲಿದೆ.
ಕಡಲು ಪ್ರಕಾಶನ ಮಂಜಗುಣಿ, ಅರಣ್ಯ ಇಲಾಖೆ, ಅಗಸೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇಗೌಡ ಕೃತಿ ಬಿಡುಗಡೆಗೊಳಿಸಲಿದ್ದು, ಅಗಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಡಿ. ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ತಹಸೀಲ್ದಾರ್ ಸತೀಶ ಗೌಡ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪಿ.ವೈ.ಸಾವಂತ, ಪುರಸಭೆ ಮುಖ್ಯಾಧಿಕಾರಿ ಎನ್.ಎಂ. ಮೇಸ್ತ, ಪುರಸಭೆ ಸದಸ್ಯ ಪ್ರಕಾಶ ಗೌಡ, ವಲಯ ಅರಣ್ಯಾಧಿಕಾರಿಗಳಾದ ಜಿ.ವಿ. ನಾಯಕ, ವಿ.ಪಿ. ನಾಯ್ಕ, ಸುರೇಶ ನಾಯ್ಕ, ರಾಘವೇಂದ್ರ ಮಳ್ಳಪ್ಪನವರ್, ಪಿ.ಎಸ್.ಐ. ಪ್ರವೀಣಕುಮಾರ ಆರ್., ಬೆಳಸೆ ಗ್ರಾ.ಪಂ. ಉಪಾಧ್ಯಕ್ಷ ಶಂಕರ ಗೌಡ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಗೋಪು ಅಡ್ಲೂರು, ಭಾವಿಕೇರಿ ಪಿಡಿಓ ಮಾದೇವ ಗೌಡ ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಹಾಗೂ ಪರಿಸರ ಪ್ರೇಮಿಗಳು ಆಗಮಿಸುವಂತೆ ಲೇಖಕ ನಾಗರಾಜ ಮಂಜಗುಣಿ ತಿಳಿಸಿದ್ದಾರೆ.