Slide
Slide
Slide
previous arrow
next arrow

ಗಮನ ಸೆಳೆದ ಮಾಸ್ಟರ್ ಅದ್ವೈತನ ಬಾಟಲ್ ಅಕ್ವೇರಿಯಂ

300x250 AD

ಶಿರಸಿ: ನಗರದ ಸೇಂಟ್ ಅಂಥೋನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೂರನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಮಕ್ಕಳ ಪ್ರತಿಭಾ ಅನ್ವೇಷಣೆ ಹಾಗೂ ಶಾಲಾ ವಾರ್ಷಿಕ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಿಯನ್ ಬುಕ್ ಆಫ್ ರೆಕಾರ್ಡ್ ವಿಜೇತ ಮಾಸ್ಟರ್ ಅದ್ವೈತ ಹಾರ್ಮೋನಿಯಂ ಮೂಲಕ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ‘ಗೊಂಬೆ ಹೇಳತೈತೆ’ ಹಾಡನ್ನು ನುಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದು ಒಂದುಕಡೆಯಾಗಿದ್ದರೆ, ಈ ಬಾಲಕನು ತಯಾರಿಸಿದ ‘ಬಾಟಲ್ ಅಕ್ವೇರಿಯಂ’ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ತನ್ನತ್ತ ಸೆಳೆದಿದ್ದು ವಿಶೇಷವಾಗಿತ್ತು.

300x250 AD

ಕೇವಲ ನಾಲ್ಕು ಖಾಲಿ ನೀರಿನ ಬಾಟಲಿಗಳನ್ನು ಜೋಡಿಸಿ ತಯಾರಿಸಿದ ವಾಟರ್ ಬಾಟಲ್ ಅಕ್ವೇರಿಯಂ ಅತ್ಯಾಕರ್ಷಕವಾಗಿತ್ತು. ಈತನ ತಂದೆ ರೋಟರಿಯನ್ ಕಿರಣಕುಮಾರ ಅವರ ಮಾರ್ಗದರ್ಶನ ಹಾಗೂ ಸಹಾಯದಿಂದ ಈ ಅಕ್ವೇರಿಯಂ ಮಾಡಿದ್ದೇನೆ ಎಂದು ಅದ್ವೈತ ತಿಳಿಸಿದ್ದಾನೆ.

Share This
300x250 AD
300x250 AD
300x250 AD
Back to top