ಕಾರವಾರ: ತಾಲ್ಲೂಕಿನ ಚೆಂಡಿಯಾ ಗ್ರಾಮದ ನಿರಾಕರ ವಾಡದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಶ್ರೀ ನವ ಚಂಡಿಕಾ ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಸಂಘದಿoದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಾಲಿ ಬಾಲ್ ಪಂದ್ಯಾವಳಿಯಲ್ಲಿ ಪರ್ಬತ್ ಪ್ಯಾಂಥಸ್ ತಂಡವು ಸಾಕ್ಷಿತ್ ಹಾಡ್ವೇðರ್ ತಂಡದ ವಿರುದ್ದ ಜಯಭೇರಿ ಗಳಿಸಿತು.
ಪಂದ್ಯಾವಳಿಯಲ್ಲಿ ಒಟ್ಟೂ 15 ತಂಡಗಳು ಭಾಗವಹಿಸಿದ್ದವು, ಪ್ರಥಮ ಬಹುಮಾನವನ್ನು ಪರ್ಬತ್ ಪ್ಯಾಂಥರ್ಸ್ ತಂಡವು ಪ್ರಥಮ ಬಹುಮಾನ, ಸಾಕ್ಷೀತ್ ಹಾರ್ಡವೇರ ತಂಡ ದ್ವಿತೀಯ ಹಾಗೂ ಎಂಡಿ ಬಾಯ್ಸ್ ಕಾರವಾರ ತೃತೀಯ ಹಾಗೂ ಗುಡಿದೇವ ತಂಡ ನಾಲ್ಕನೇ ಬಹುಮಾನ ಪಡೆಯಿತು. ನಗದು ಹಾಗೂ ಟ್ರೋಪಿಯನ್ನು ಶಾಸಕಿ ರೂಪಾಲಿ ನಾಯ್ಕ ಅವರು ನೀಡಿದರು.
ಬೆಸ್ಟ್ ಸ್ಮಾಶರ್ ಎಂ.ಡಿ. ಬಾಯ್ಸ್ ತಂಡದ ಮಂಜುನಾಥ, ಬೆಸ್ಟ್ ಲಿಪ್ಟರ್ ಪರ್ಬತ್ ಪ್ಯಾಂಥರ್ಸ್ ತಂಡದ ಚಿನ್ನು ಹಾಗೂ ಆಲ್ ರೌಂಡರ್ ಆಟಗಾರ ಸಾಕ್ಷೀತ್ ಹಾಡ್ವೇರ ತಂಡದ ಯೋಗೇಶ ಬರ್ಗಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ಎಸ್.ನಾಯ್ಕ ಮಾತನಾಡಿ, ಇಲ್ಲಿ ಗೆದ್ದವರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗೆಲುವು ಸಾಧಿಸಲಿ ನಿಮ್ಮ ಜತೆ ನಾನು ಇದ್ದೇನೆ ಎಂದು ತಿಳಿಸಿದರು. ಪ್ರತಿವರ್ಷ ಇಲ್ಲಿ ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳು ನಡೆಯಬೇಕು. ನನ್ನ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು.
ಹಾಗೆಯೇ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಊರಿನ ಹಿರಿಯ ಕ್ರೀಡಾಪಟುಗಳಿಗೆ ಶಾಸಕಿ ರೂಪಾಲಿ ನಾಯ್ಕ ಸನ್ಮಾನಿಸಿ ಗೌರವಿಸಿದರು. ಗ್ರಾಮ ಪಂಚಾಯತ ಅಧ್ಯಕ್ಷ ಜಿತೇಶ ಅರ್ಗೆಕರ, ಉಪಾಧ್ಯಕ್ಷೆ ಕಲ್ಪನಾ ನಾಯ್ಕ, ಸದಸ್ಯರು, ಊರಿನ ನಾಗರಿಕರು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.