ಅಂಕೋಲಾ: ತಾಲೂಕಿನ ಹೃದಯಭಾಗದಲ್ಲಿರುವ ಕನಸೆಗದ್ದೆ ಗ್ರಾಮ ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ತನ್ನದೆಯಾದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಜಾತಿ, ಧರ್ಮ ಭೇದವಿಲ್ಲದೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳು ಯಥೇಚ್ಛವಾಗಿ ಆಚರಿಸಲ್ಪಡುತ್ತಾ ಮೆರಗು ನೀಡುತ್ತಿದೆ. ಅಂತೆಯೇ ಇಲ್ಲಿನ ನರಸಿಂಹ ದೇವರ ಭಜನಾ ಸಪ್ತಾಹ ಈ ಬಾರಿ ಅದ್ಧೂರಿ ಸುವರ್ಣಮಹೋತ್ಸವ ಆಚರಿಸಿಕೊಳ್ಳುತ್ತಿದೆ.
ಭಜನಾ ಮಂಡಳಿ ಪ್ರಾರಂಭ: ಅಂದು ದಾಮೋದರ ಶೆಟ್ಟಿ ಕುಟುಂಬದವರು ನೀಡಿದ ಜಾಗದಲ್ಲಿ ಕಟ್ಟಿದ ಅಂಗನವಾಡಿ ಕಟ್ಟಡದ ಉದ್ಘಾಟನೆಯ ಪ್ರಯುಕ್ತ ನಾಟಕವೊಂದನ್ನು ಪ್ರದರ್ಶಿಸಲು ನಿರ್ಧರಿಸಿದಂತೆ, ಕಟ್ಟಡದ ಉದ್ಘಾಟನೆ ವಿಳಂಬವಾದುದ್ದರಿOದ ಆ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಾಂಬ್ಳೆಕರ್ ಮಾಸ್ತರ ಹಾಗೂ ಸುಬ್ರಮಣ್ಯ ಶೆಟ್ಟಿ,ಅನಂತ ಶೆಟ್ಟಿ,ರಾಮು ಶೆಟ್ಟಿ, ನಾಗೇಶ ಮಹಾಲೆ, ದತ್ತು ನಾಯ್ಕ, ರತ್ನಾಕರ ನಾಯ್ಕ, ಗಣಪತಿ ಬಂಟ್, ಗಂಗಾಧರ ಅಂಕೋಲೆಕರ, ಕಮಲಾಕರ ನಾಯ್ಕ, ಗೋಪಾಲ ಮಾಸ್ತರ, ಮಂಜು,ಸುರೇಶ್, ನಾಗೇಶ, ಶಿವಾನಂದ, ನರಸಿಂಹ ಶೆಟ್ಟಿ ಹಾಗೂ ಮುಂತಾದವರು ಸೇರಿ ಸಂಘಟಿತರಾಗಿ ಹುಟ್ಟಿದ್ದೇ ಇಂದಿನ ನರಸಿಂಹ ಭಜನಾ ಮಂಡಳಿ. ಒಂದೂವರೆ ದಶಕದ ನಂತರ ಅನ್ಯದರ್ಮಿಯ ಓರ್ವ ವ್ಯಕ್ತಿ ಭಜನಾ ಮಂಡಳಿಯ ಕಾರ್ಯದರ್ಶಿಯಾಗಿದ್ದು ಈ ಭಜನಾ ಮಂಡಳಿಯು ಸರ್ವಧರ್ಮದ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ.
1974ನೇ ವರ್ಷದಿಂದ ಶ್ರೀ ನರಸಿಂಹ ಭಜನಾ ಮಂಡಳಿಯಿoದ ಮಾಘದ ಪಾಡ್ಯದಿಂದ ರಥ ಸಪ್ತಮಿಯವರೆಗೆ ಏಳು ದಿನಗಳ ಕಾಲ ಶ್ರೀ ನರಸಿಂಹ ದೇವರ ಭಜನೆ ಸಪ್ತಾಹವು ಪ್ರಾರಂಭವಾಗಿ ಅಂದಿನಿoದ ಇಂದಿನವರೆಗೂ ಅದ್ದೂರಿಯಿಂದ ಮಹೋತ್ಸವವು ನೆರವೇರುತ್ತಿದೆ. ಅಂದಿನಿoದ ಭಜನೆಯು ಪೀರು ಶೆಟ್ಟರ ಕಟ್ಟೆಯಿಂದ ಪ್ರಾರಂಭಗೊoಡು ಶ್ರೀ ನರಸಿಂಹ ದೇವಸ್ಥಾನ (ಪರಮಾಣ ಕಟ್ಟೆ) ಮುಖಾಂತರ ಗ್ರಾಮದೇವತೆ ಶ್ರೀ ಶಾಂತಾದುರ್ಗಾ ದೇವಸ್ಥಾನಕ್ಕೆ ತೆರಳಿ ಆರತಿ ಸ್ವೀಕರಿಸಿತ್ತಾ ತನ್ನ ಮೂಲಸ್ಥಾನಕ್ಕೆ ಮರಳುವುದು,ಪ್ರಪ್ರಥಮವಾಗಿ ನರಸಿಂಹ ದೇವರ ರಥವಷ್ಟೇ ರಥೋತ್ಸವದಲ್ಲಿ ಬಾಗಿಯಾಗುತ್ತಿತ್ತು, ಪ್ರಾರಂಭವಾದ ಮೂರುವರ್ಷಗಳ ನಂತರ ಹೊನ್ನೇಕೆರಿಯ ರಾಮನಾಥ (ಮಹಾದೇವ) ದೇವರ ರಥವು ನರಸಿಂಹ ದೇವರ ರಥದೊಂದಿಗೆ ಜೊತೆಗೂಡಿ ಉತ್ಸವವನ್ನು ಆಚರಿಸಲಾಗುತ್ತಿದೆ.
ರಥಸಪ್ತಮಿಯಂದು ಶ್ರೀ ನರಸಿಂಹದೇವರ ರಥವು ಮೂಲಸ್ಥಳದಿಂದ ಹೊನ್ನೇಕೆರಿಗೆ ತೆರಳಿ ಮಹಾದೇವರ ರಥದೊಂದಿಗೆ ಭುಮ್ತಾಯಿ ಶಾಂತಾದುರ್ಗೆ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪೂಜೆ ಸಲ್ಲಿಸಿ ಎರಡು ರಥವು ಪರಮಾಣ ಕಟ್ಟೆಗೆ ಬಂದು ಪೂಜೆ ಸಲ್ಲಿಸಿ ನಂತರ ದೀಪಾಲಂಕಾರಗೊoಡ ಕನಸೆಗದ್ದೆ ರಸ್ತೆಯಲ್ಲಿ ಸಾಗಿ ಭಕ್ತರಿಂದ ಅರತಿಗಳನ್ನು ಸ್ವೀಕರಿಸುತ್ತಾ ಪೀರಶೆಟ್ಟಿ ಕಟ್ಟೆಗೆ ಬಂದು ಪೂಜೆ ಪುನಸ್ಕಾರಗಳನ್ನು ಸ್ವೀಕರಿಸಿ ಅಲ್ಲಿಂದ ಮಹಾದೇವರ ರಥವು ಹೊನ್ನೇಕೆರಿಗೆ ತೆರಳುತ್ತದೆ, ಹಾಗೆಯೇ ನರಸಿಂಹ ದೇವರ ರಥವು ಜಾಂಬ್ಳೆಕರ್ ಮಾಸ್ತರ ಅವರ ಜಾಗೆಯಲ್ಲಿ ನಡೆಯುವ ಕಾರ್ಯಕ್ರಮದ ವೇದಿಕೆಯ ಮುಂದೆ ಆಸೀನರಾಗುವುದು. ನಂತರ ದೇವರ ಫಲಾವಳಿಗಳ ಸವಾಲು ನಂತರ ನಾಟಕವು ಪ್ರದರ್ಶನದ ನಂತರ ಪೀರುಶೆಟ್ಟಿ ಕಟ್ಟೆಗೆ ಬಂದು ವಾರ್ಷಿಕ ಭಜನಾ ಸಪ್ತಾಹವು ಸಂಪನ್ನಗೊಳ್ಳುವುದು.
ನರಸಿಂಹ ದೇವರ ಭಜನೆ ಪ್ರಾರಂಭಗೊOಡು 50 ವರ್ಷ. ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಭಜನಾ ಮಂಡಳಿಯು ಅಧ್ಯಕ್ಷ ಗಜು ನಾಯ್ಕ ಅವರ ನೇತೃತ್ವದಲ್ಲಿ ಸುವರ್ಣ ಮಹೋತ್ಸವದ ಅಧ್ಯಕ್ಷ ಗಂಗಾಧರ ಅಂಕೋಲೆಕರ ಹಿರಿತನದೊಂದಿಗೆ, ಶಾಸಕಿ ರೂಪಾಲಿ ನಾಯ್ಕ ಅವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಕನಸೆಗದ್ದೆಯ ಸ್ಥಳೀಯರ ಒಗ್ಗೂಡುವಿಕೆಯಲ್ಲಿ ಭಜನಾ ಸಪ್ತಾಹವು ಅತೀ ವಿಜೃಂಭಣೆಯಿoದ ಆಚರಣೆಯಾಗುತ್ತಿದೆ ಈ ವರ್ಷದ ಭಜನಾ ಸಪ್ತಾಹವು ಜನವರಿ 22ರಿಂದ ಪ್ರಾರಂಭವಾಗಿದ್ದು ಇಂದಿನವರೆಗೂ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೆ, ರಂಗೋಲಿ ಸ್ಪರ್ಧೆ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆಯುತ್ತಿದೆ. ಅದೇ ರೀತಿ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಮುನ್ನೆಲೆಗೆ ಬಂದು ನಡೆಸಿ ಕೊಡುವ ಅರಿಸಿಣ ಕುಂಕುಮ ಮತ್ತು ನೃತ್ಯ, ಆಟ, ಸಂಗೀತ ಮುಂತಾದ ಕಾರ್ಯಕ್ರಮಗಳು ನೋಡುಗರ ಕಣ್ಣಿಗೆ ರಸದೌತಣವನ್ನು ನೀಡುತ್ತಿದೆ.
1999ರಲ್ಲಿ ನಡೆದ ನರಸಿಂಹ ದೇವರ ಭಜನಾ ಉತ್ಸವವು 25ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಒಂದು ಹೊಸ ಇತಿಹಾಸವನ್ನೇ ನಿರ್ಮಿಸಿತು. ಅಂದರೆ ಅಂಕೋಲಾ ಇತಿಹಾಸದಲ್ಲೇ ಭಜನಾ ಸಪ್ತಾಹದಲ್ಲಿ ಆರುದೇವರ ರಥವು ಪ್ರಥಮ ಬಾರಿಗೆ ಒಂದೆಡೆ ಸೇರಿ ದೇವರ ಕಾರ್ತಿಕ ಉತ್ಸವ ದೊಡ್ಡದಾಗಿತ್ತು. ಅಂದು ಕನಸೆಗದ್ದೆಯಲ್ಲಿ 6 ದೇವರ ರಥವಾದ ನರಸಿಂಹ, ಮಹಾದೇವರು, ವೆಂಕಟರಮಣ, ನಾರಾಯಣ, ಶಾಂತಾದುರ್ಗಾ, ಆರ್ಯದುರ್ಗಾ ರಥವು ಬಾಗಿಯಾಗಿ ಆದ್ದೂರಿಯ ರಥೋತ್ಸವ ಎನಿಸಿಕೊಂಡಿತು. ಅದರಂತೆಯೇ ಈ ವರ್ಷವೂ ಸುವರ್ಣ ಮಹೋತ್ಸವದ ಪ್ರಯುಕ್ತ 6 ದೇವರ ರಥೋತ್ಸವು ನೆರವೇರಲಿದ್ದು ನರಸಿಂಹ, ಮಹಾದೇವರು, ವೆಂಕಟರಮಣ, ನಾರಾಯಣ, ಶಾಂತಾದುರ್ಗಾ, ಪ್ರಥಮ ಬಾರಿ ಶ್ರೀ ವಿಠಲ ಸದಾಶಿವ ದೇವರ ರಥ ಭಾಗಿಯಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.