ಅಂಕೋಲಾ: ಸವಿ ಫೌಂಡೇಶನ್ ಮೂಡಬಿದ್ರಿ ಹಾಗೂ ರೋಟರಿ ಕ್ಲಬ್ ಅಂಕೋಲಾ ಮತ್ತು ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಫೆ.4ರಂದು ಯುಪಿಎಸ್‌ಸಿ (ಐಎಎಸ್, ಐಪಿಎಸ್, ಐಎಪ್‌ಎಸ್, ಐಆರ್‌ಎಸ್) ಪೂರ್ವಭಾವಿ ಮಾಹಿತಿ ತಿಳುವಳಿಕೆ ಹಾಗೂ ಬ್ಯಾಂಕಿoಗ್ ಪರೀಕ್ಷೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಸವಿ ಫೌಂಡೇಶನ್ ಚೇರಮನ್ ಡಾ.ಸಂದೀಪ ನಾಯಕ ಹೇಳಿದರು.
ಅವರು ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಫೆ.4 ರಂದು ಬೆಳಿಗ್ಗೆ 9.30 ಕ್ಕೆ ನಗರದ ಪೂರ್ಣಪ್ರಜ್ಞಾ ಕಾಲೇಜಿನಲ್ಲಿ ಜರುಗುವ ಕಾರ್ಯಾಗಾರವನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾ ಅಧಿಕಾರಿ ಈಶ್ವರ ಖಂಡು ಉದ್ಘಾಟಿಸಲಿದ್ದಾರೆ. ಐಏಎಸ್ ಮತ್ತು ಬ್ಯಾಂಕಿOಗ್ ಪರೀಕ್ಷೆಯ ನುರಿತ ತರಬೇತುದಾರರಾದ ಪಾರ್ಶ್ವನಾಥ ಪಾಲಭಾವಿ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ ಎಂದರು.
ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾರ್ಗದರ್ಶನ, ಪ್ರತಿಭಾವಂತರಿಗೆ ಪ್ರೋತ್ಸಾಹ, ಯೋಗ ಮತ್ತು ಕ್ರೀಡೆಗೆ ಪ್ರೋತ್ಸಾಹ, ಕೃಷಿ, ನೀರು, ಮಣ್ಣು ಸಂರಕ್ಷಣೆಯ ಕುರಿತು ತರಬೇತಿ, ಸ್ಥಳೀಯ ಉತ್ಪಾದನೆಗಳಿಗೆ ಆದ್ಯತೆ (ಲೋಕಲ್ ಫಾರ ವೋಕಲ್), ಮತ್ತು ಹೋಸ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಸಹಕಾರಗಳ ದೃಷ್ಠಿಯಿಂದ ಸವಿ ಫೌಂಡೇಶನ್ ಕಳೆದ ಡಿಸೆಂಬರ್ 2022ರಿಂದ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ದೇಶದ ಉನ್ನತ ಹುದ್ದೆಯಾದ ಐಏಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಉನ್ನತ ಹುದ್ದೆ ಪಡೆಯುವ ಕನಸನ್ನು ನನಸಾಗಿಸಲು ಏಕಾಗ್ರತೆಯ ಜೊತೆಗೆ ಸರಿಯಾದ ಮಾರ್ಗದರ್ಶನವನ್ನು ನೀಡುವ ಉದ್ದೇಶದಿಂದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಅಭ್ಯರ್ಥಿಗಳು ಫೆ.1ರವರೆಗೆ ತಮ್ಮ ಮೊಬೈಲ್ ಸಂಖ್ಯೆಯೊoದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಂಕೋಲಾದ ಅಧ್ಯಕ್ಷ ರಾಘವೇಂದ್ರ ಭಟ್, ಮಾಜಿ ಅಧ್ಯಕ್ಷ ಡಾ. ಸಂಜೀವ ನಾಯಕ, ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಯ ಚೇರ್‌ಮನ್ ಜಗದೀಶ ನಾಯಕ, ಕಾರ್ಯಾಧ್ಯಕ್ಷ ಪ್ರಶಾಂತ ನಾಯಕ ಇದ್ದರು.