ಸಿದ್ದಾಪುರ: ವಿಜಯ ಸಂಕಲ್ಪ ಅಭಿಯಾನದ ಸಭೆಯು ಸಿದ್ದಾಪುರ ಮಂಡಲದ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು. ಅಭಿಯಾನದ ಜಿಲ್ಲಾ ಸಮಿತಿಯ ಸದಸ್ಯರು ಮತ್ತು ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ರೇಖಾ ಹೆಗಡೆ ಮಾತನಾಡಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಮನೆ-ಮನೆಯನ್ನು ತಲುಪುವ ಬಿಜೆಪಿ ಕಾರ್ಯಕರ್ತರು ನಮ್ಮ ರಾಜ್ಯದ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡಬೇಕು ಎಂದರು. ಮಹಿಳಾ ಮೋರ್ಚಾ ಮತ್ತು ಯುವಮೋರ್ಚಾ ಕಾರ್ಯಕರ್ತರು ಬೃಹತ್ ಪ್ರಮಾಣದಲ್ಲಿ ಪಕ್ಷದ ಸqದಸ್ಯತ್ವ ಮಾಡಿಸಲು ಮುಂದಾಗಿ ಎಂದರು.
ಅಭಿಯಾನದ ಸಮಿತಿಯ ಸದಸ್ಯ ಮತ್ತು ಜಿಲ್ಲಾ ಕಾರ್ಯದರ್ಶಿ ನಾಗರಾಜ ನಾಯ್ಕ ಬೇಡ್ಕಣಿ ನಮ್ಮ ಎಲ್ಲಾ ಕಾರ್ಯಕರ್ತರು ಸಕ್ರಿಯವಾಗಿ ಅಭಿಯಾನದ ಚಟುವಟಿಕೆಯಲ್ಲಿ ತೊಡಗಬೇಕು ಎಂದರು. ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸದಸ್ಯತ್ವ ಮಾಡಿಸಿ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಬಿಜೆಪಿಯ ಸದಸ್ಯರನ್ನಾಗಿಸಿ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ ನಮ್ಮ ಬೂತ್ ಸಮಿತಿ ಮತ್ತು ಪೇಜ್ ಪ್ರಮುಖರನ್ನು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿ, ಅವರು ಬೂತ್ ನಲ್ಲಿರುವ ಪ್ರತಿ ಮನೆಯನ್ನು ತಲುಪುವಂತೆ ಮಾಡಿ ಎಂದು ಹೇಳಿದರು. ಪೇಜ್ ಪ್ರಮುಖರು ಕ್ರಿಯಾಶೀಲರಾದರೆ ಅಭಿಯಾನದ ಎಲ್ಲಾ ಕೆಲಸ ಸುಲಭವಾಗುತ್ತದೆ, ಜನ-ಮನ ಗೆಲ್ಲುವ ಸಂಪರ್ಕ ಸುಲಭವಾಗಿ ಆಗುತ್ತದೆ ಎಂದು ಹೇಳಿದರು. ನಮ್ಮ ಡಬಲ್ ಇಂಜಿನ್ ಸರ್ಕಾರದ ಜನಪರ ಕಾರ್ಯಗಳ ಮಾಹಿತಿ ಜನರಲ್ಲಿ ಇದೆ, ಸಂಘಟನೆ ಗಟ್ಟಿಯಾಗಿದೆ, ಬಿಜೆಪಿಯನ್ನು ಮೆಚ್ಚುವ ಜನರ ನಡುವೆ ಜನಪರವಾದ ನಮ್ಮ ಸಾಧನೆಯ ಪ್ರಚಾರ ಕಷ್ಟವೇನಲ್ಲ, ವಿಜಯ ಸಂಕಲ್ಪ ಅಭಿಯಾನ ಯಶಸ್ವಿಯಾಗಿ ನಡೆಯಲಿ ಎಂದು ಹೇಳಿದರು.
ಸಭೆಯಲ್ಲಿ ಸಂಘಟನಾತ್ಮಕ ವಿಷಯಗಳ ಚರ್ಚೆ ಮತ್ತು ಅಭಿಯಾನದ ಕಾರ್ಯಯೋಜನೆ ಮಾಡಲಾಯಿತು. ಬಳಿಕ ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಮತ್ತು ಕಾರ್ಯಕರ್ತರು ನಗರದ ಅಂಗಡಿಗಳಿಗೆ ತೆರಳಿ, ವಿಜಯ ಸಂಕಲ್ಪ ಅಭಿಯಾನದ ಕರಪತ್ರ ನೀಡಿ, ಬಿಜೆಪಿಯ ಸದಸ್ಯತ್ವ ಮಾಡಿಸಿದರು.
ಮಂಡಲ ಅಧ್ಯಕ್ಷರಾದ ಮಾರುತಿ ನಾಯ್ಕ ಹೊಸೂರು ಅಭಿಯಾನದ ವಿವಿಧ ಜವಾಬ್ದಾರಿಯನ್ನು ಹಂಚಿಕೆ ಮಾಡಿದರು. ಮಂಡಲ ಪ್ರಭಾರಿ ಕುಮಾರ ಮಾರ್ಕಾಂಡೆ, ಜಿಲ್ಲಾ ಕಾರ್ಯದರ್ಶಿ ಕೃಷ್ಣಮೂರ್ತಿ ಕಡಕೇರಿ, ಮಂಡಲ ಪ್ರಧಾನ ಕಾರ್ಯದರ್ಶಿ ಎಸ್. ಕೆ. ಮೇಸ್ತಾ, ಪ್ರಸನ್ನ ಹೆಗಡೆ, ಮಾಬ್ಲೇಶ್ವರ ಹೆಗಡೆ, ಸುರೇಶ ನಾಯ್ಕ, ಕೆ. ಆರ್. ವಿನಾಯಕ, ಮಂಜುನಾಥ ಭಟ್, ಶ್ರೀಮತಿ ಪಾರ್ವತಿ ನಾಯ್ಕ, ಶ್ರೀಮತಿ ಸುಜಾತಾ ಹೆಗಡೆ, ಈಶ್ವರ ನಾಯ್ಕ, ಕೃಷ್ಣಪ್ಪ ಮಳವಳ್ಳಿ ಹಾಗೂ ವಿವಿಧ ಸ್ಥರದ ಕಾರ್ಯಕರ್ತರು ಉಪಸ್ಥಿತರಿದ್ದರು.