• first
  Slide
  Slide
  previous arrow
  next arrow
 • ವಿದ್ಯಾವಂತರೇ ಸೈಬರ್ ಕ್ರೈಂಗೆ ಒಳಗಾಗುತ್ತಿದ್ದಾರೆ: ಭೀಮಾಶಂಕರ

  300x250 AD

  ಶಿರಸಿ: ಇಂದಿನ ಯುವ ಜನತೆ ಸೈಬರ್ ಕ್ರೈಂ ಹಾಗೂ ಇನ್ನಿತರ ಮೋಸದ ಜಾಲಗಳ ಬಗ್ಗೆ ಮಾಹಿತಿ ತಿಳಿದಿರಬೇಕು. ವಿದ್ಯಾವಂತರೇ ಸೈಬರ್ ಕ್ರೈಂ ಗೆ ಒಳಗಾಗುತ್ತಿದ್ದಾರೆ. ಜಾಗೃತಿ ಮೂಡಿಸುವ ಮೂಲಕ ಸೈಬರ್ ಕ್ರೈಮ್ ಅನ್ನು ತಡೆಗಟ್ಟಬೇಕು ಎಂದು ಮಾರ್ಕೆಟ್ ಪೊಲೀಸ್ ಠಾಣೆಯ ಪಿಎಸ್ಐ ಭೀಮಾಶಂಕರ್ ಹೇಳಿದರು.

       ಅವರು ಎಂಇಎಸ್ ನ ಎಂಎಂ  ಕಲಾ ಮತ್ತು ವಿಜ್ಞಾನ  ವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ, ಎಂಇಎಸ್ ಕಾನೂನು ಮಹಾವಿದ್ಯಾಲಯ ವತಿಯಿಂದ ಆಯೋಜಿಸಲಾಗಿದ್ದ ಕಾನೂನು ಅರಿವು ವಿಷಯದ ಕುರಿತು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸೈಬರ್ ಕ್ರೈಂ ಎಂಬುದು ಮೋಸದ ಜಾಲವಾಗಿದೆ. ಅಮಾಯಕರನ್ನು ಗುರಿಯಾಗಿಸಿಕೊಂಡು ಅಂತರ್ಜಾಲದ ಮೂಲಕ ಹಣ ಕೀಳುವ ದಂಧೆ ನಡೆಯುತ್ತಿದೆ. ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿದ್ದು ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು. ಹಾಗೂ ಏನೇ ಸಮಸ್ಯೆ ಬಂದರೂ 112 ಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಹೇಳಿದರು.

             ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಸಮಿತಿಯ  ಅಧ್ಯಕ್ಷರಾದ ಎಸ್. ಕೆ ಭಾಗವತ್ ಮಾತನಾಡಿ ಮೊಬೈಲ್ ತಂತ್ರಜ್ಞಾನ ಬಂದಾಗಿನಿಂದ ಅಪರಾಧಿಗಳನ್ನು ಹಿಡಿಯಲು ಸಾಧ್ಯವಾಗದಷ್ಟು ಅಪರಾಧಗಳು ಆಗುತ್ತಿದ್ದರೂ ಪೊಲೀಸ್ ವ್ಯವಸ್ಥೆ ಉತ್ತಮವಾಗಿದೆ ಹಾಗೂ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತದೆ. ಇದು ಶ್ಲಾಘನೀಯ ಕೆಲಸ. ವಿದ್ಯಾರ್ಥಿಗಳು ಅಂತರ್ಜಾಲವನ್ನು  ಕೆಟ್ಟ ಕೆಲಸಗಳಿಗೆ ಬಳಸಿಕೊಳ್ಳದೆ ಜಾಗೃತಿಯಲ್ಲಿರಬೇಕು. 

  300x250 AD

  ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಟಿ. ಎಸ್. ಹಳೆಮನೆ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ಎಂ. ಎನ್. ಭಟ್ ಸ್ವಾಗತಿಸಿ ನಿರೂಪಿಸಿದರು. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಅಶೋಕ್ ಭಟ್ಕಳ್ ವಂದಿಸಿದರು.

  Share This
  300x250 AD
  300x250 AD
  300x250 AD
  Back to top