ಅಂಕೋಲಾ: ಪಟ್ಟಣದ ಕನಸೆಗದ್ದೆಯ ಶ್ರೀ ನರಸಿಂಹ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಪ್ರಯುಕ್ತ ತಾಲೂಕಾ ಮಟ್ಟದ ಚಿತ್ರಕಲೆ ಮತ್ತು ಮೆಹಂದಿ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಶ್ರೀ ನರಸಿಂಹ ಭಜನಾ ಮಂಡಳಿಯ ಸಭಾಭವನದಲ್ಲಿ ಬೆಳಿಗ್ಗೆ ನಡೆದ ಚಿತ್ರಕಲೆ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ 5 ರಿಂದ 8 ನೇ ತರಗತಿ ವರೆಗಿನ ಮತ್ತು ಹಿರಿಯರ ವಿಭಾಗದಲ್ಲಿ 9 ನೇ ವರ್ಗದಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀ ನರಸಿಂಹ ದೇವರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಸಂಪತ್ ಶೇಖರ ಹರಿಕಂತ್ರ ಕೇಣಿ ಪ್ರಥಮ, ಪುಷ್ಪರಾಜ ಈಶ್ವರ ಖಾರ್ವಿ ಬೆಳಂಬರ ದ್ವಿತೀಯ, ಕೀರ್ತಿ ಗೋವಿಂದ ನಾಯ್ಕ ತೃತೀಯ ಸ್ಥಾನ ಪಡೆದರು. ಹಿರಿಯರ ವಿಭಾಗದಲ್ಲಿ ಸೂರಜ ಎಸ್ ಲಕ್ಷ್ಮೇಶ್ವರ ಪ್ರಥಮ, ರೋಹನ ಆಚಾರಿ ದ್ವಿತೀಯ, ಕಿಶನ್ ಶೇಟ್ ತೃತೀಯ ಸ್ಥಾನ ಪಡೆದರು.
ಸಂಜೆ ನಡೆದ ಯುವತಿಯರು/ ಮಹಿಳೆಯರಿಗಾಗಿ ಮೆಹಂದಿ ಸ್ಪರ್ಧೆಯಲ್ಲಿ ಅಲೈನಾ ಎನ್ ಶೇಖ ಪ್ರಥಮ, ರಶ್ಮಿ ನರೇಶ ರಾಯ್ಕರ ದ್ವಿತೀಯ, ಮತ್ತು ಜಯಶ್ರೀ ಕೆ ಗೌಡ ತೃತೀಯ ಸ್ಥಾನ ಪಡೆದರು. ಈ ಸಂದರ್ಭದಲ್ಲಿ ಸ್ಪರ್ಧೆಯ ನೇತೃತ್ವ ವಹಿಸಿ ಸಂಘಟಿಸಿದರು. ಶ್ರೀ ನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ಗಜು ನಾಯ್ಕ, ಪುರಸಭೆಯ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ನಿರ್ದೇಶಕ ರಾಘವೇಂದ್ರ ಮಹಾಲೆ ಮಂಡಳಿಯ ಪದಾಧಿಕಾರಿಗಳು, ಇನ್ನಿತರರು ಉಪಸ್ಥಿತರಿದ್ದರು.