• first
  Slide
  Slide
  previous arrow
  next arrow
 • ಯುವ ಕಾಂಗ್ರೆಸ್‌ನಿಂದ ‘ಯೂತ್ ಜೋಡೋ ಬೂತ್ ಜೋಡೋ’

  300x250 AD

  ದಾಂಡೇಲಿ: ಬ್ಲಾಕ್ ಯುವ ಕಾಂಗ್ರೆಸ್ ಆಶ್ರಯದಲ್ಲಿ ನಗರದ ಗಾಂಧಿನಗರದ ವಾರ್ಡ್ ನಂ.02ರಲ್ಲಿ ‘ಯೂತ್ ಜೋಡೋ ಬೂತ್ ಜೋಡೋ’ ಕಾರ್ಯಕ್ರಮ ನಡೆಸಲಾಯಿತು.
  ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನ್ ಮುನ್ನ ವಹಾಬ್, ತಾಲೂಕಿನೆಲ್ಲೆಡೆ ‘ಯೂತ್ ಜೋಡೋ ಬೂತ್ ಜೋಡೋ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಯುವ ಕಾಂಗ್ರೆಸ್ ಸಮಿತಿಯನ್ನು ಬಲಾಡ್ಯಗೊಳಿಸುವುದರೊಂದಿಗೆ ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಶ್ರಮಿಸುವ ಕರ‍್ಯವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬರಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಅನುಷ್ಟಾನ ಪಡಿಸಲಾದ ಜನಪಯೋಗಿ ಯೋಜನೆಗಳು ಸದಾ ಸ್ಮರಣೀಯ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮಗದೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಕ್ಷೇತ್ರದ ನಮ್ಮ ನಾಯಕರಾದ ಆರ್.ವಿ.ದೇಶಪಾಂಡೆಯವರ ಜನಸೇವೆ ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಅವರು ತಂದ ಜನಪರ ಯೋಜನೆಗಳನ್ನು ಮುಂದಿಟ್ಟುಕೊoಡು ಪಕ್ಷ ಕಟ್ಟುವ ಕಾಯಕದಲ್ಲಿ ನಾವು ನೀವೆಲ್ಲರು ನಿರತರಾಗಬೇಕೆಂದು ಕರೆ ನೀಡಿದರು.
  ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾದ ವಿ.ಆರ್.ಹೆಗಡೆಯವರು ಮಾತನಾಡಿ ಜನಪರ ಆಡಳಿತ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಿದ್ದು, ರಾಜ್ಯ ಮತ್ತು ಕೇಂದ್ರದ ಜನವಿರೋಧಿ ನೀತಿಯಿಂದ ಜನ ಬೇಸತ್ತಿದ್ದಾರೆ ಎಂದರು.
  ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರುಗಳಾದ ಶಿವಪ್ಪ ನಾಯ್ಕ, ರಫೀಕ್ ಅಹ್ಮದ್ ಖಾನ್, ಸಲೀಂ ಖಾನಪುರಿ, ತುಕರಾಮ ಪರಸೋಜಿ, ಪ್ರತಾಪ್ ಸಿಂಗ್ ರಜಪೂತ್ ಮೊದಲಾದವರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top