• first
  Slide
  Slide
  previous arrow
  next arrow
 • ಭರತನಾಟ್ಯ ಕಲೆ ಉಳಿಸಿ, ಬೆಳೆಸುವ ಕಾರ್ಯವಾಗಲಿ: ಸುನೀಲ್ ನಾಯ್ಕ

  300x250 AD

  ಭಟ್ಕಳ: ಭರತನಾಟ್ಯ ಕಲೆ ಭಾರತೀಯ ಸಂಸ್ಕೃತಿಯ ಪುರಾತನ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.
  ಅವರು ನಗರದ ನಾಗಯಕ್ಷೆ ಸಭಾಭವನದಲ್ಲಿ ಭರತನಾಟ್ಯ ಕಲಾವಿದ ಸಹೋದರಿಯರಾದ ಶಿಲ್ಪ ನಾಯ್ಕ ಹಾಗೂ ಶೃತಿ ನಾಯ್ಕ ಇವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಕಲೆ ಯಾರದೇ ಸೊತ್ತಲ್ಲ. ಕಲೆ ಬಡವರು, ಶ್ರೀಮಂತರೆನ್ನದೇ ಯಾರು ಕಷ್ಟಪಟ್ಟು ಸಾಧನೆ ಮಾಡುತ್ತಾರೋ ಅವರಲ್ಲಿ ಕಲೆ ನೆಲೆಗೊಳ್ಳೂತ್ತದೆ ಎಂದರು.
  ಇದೊoದು ಅಭೂತಪೂರ್ವವಾದ ವಿಶೇಷ ಕಾರ್ಯಕ್ರಮವಾಗಿದೆ. ಭಟ್ಕಳದಲ್ಲಿ ಪ್ರಥಮ ಭಾರಿ ಭರತನಾಟ್ಯ ರಂಗ ಪ್ರವೇಶದ ಕಾರ್ಯಕ್ರಮವಾಗಿದೆ. ಭರತನಾಟ್ಯದಲ್ಲಿ ಈ ಸಹೋದರಿಯರು ಆಭೂತಪೂರ್ವ ಸಾಧನೆ ಮಾಡಿದ್ದಾರೆ. ಮದುವೆಯಾದ ನಂತರವೂ ಈ ಸಹೋದರಿಯರು ಕಲೆಯನ್ನು ಬಿಡದೇ ಸಾಧನೆ ಮಾಡಿ ಇಂದು ರಂಗಭೂಮಿ ಪ್ರವೇಶಿಸಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದರು.
  ಭರತನಾಟ್ಯ ತರಬೇತುದಾರರಾದ ಬೆಂಗಳೂರಿನ ಸ್ವಾತಿ ಭಾರದ್ವಾಜ ಮಾತನಾಡಿ, ಸಹೋದರಿಯರಾದ ಶಿಲ್ಪ ಮತ್ತು ಶೃತಿಯವರ ಸಾಧನೆಯ ಹಿಂದೆ ಅಪಾರವಾದ ಶ್ರಮವಿದೆ. ಇವರ ಸಾಧನೆಗೆ ಇವರ ಕುಟುಂಬದವರು ಬಹಳಷ್ಟು ಬೆಂಬಲ ನೀಡಿದ್ದರಿಂದ ಈ ಸಾಧನೆ ಮಾಡಲು ಅನುಕೂಲವಾಯಿತು ಎಂದರು.
  ವೇದಿಕೆಯಲ್ಲಿದ್ದ ರಾಜ್ಯಮಟ್ಟದ ನೃತ್ಯ ಕಲಾವಿದೆ ಪಲ್ಲವಿ ರಾಘವೇಂದ್ರ, ನಾಮಧಾರಿ ಗುರುಮಠದ ಅಧ್ಯಕ್ಷ ಕೃಷ್ಣ ನಾಯ್ಕ, ಡಾ.ನಮೃತಾ ನಾಯ್ಕ, ಡಾ.ರವಿ ನಾಯ್ಕ, ಮಹೇಶ ಭಟ್, ಕಷ್ಣಾನಂದ ವಾಂಡೇಕರ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಭರತನಾಟ್ಯ ತರಬೇತುದಾರರಾದ ಸ್ವಾತಿ ಭಾರದ್ವಾಜ ನಟರಾಜ ದೇವರಿಗೆ ಪೂಜೆ ಸಲ್ಲಿಸಿ ಸಹೋದರಿಯರಾದ ಶಿಲ್ಪ ನಾಯ್ಕ ಹಾಗೂ ಶೃತಿ ನಾಯ್ಕರವರಿಗೆ ಗೆಜ್ಜೆಯನ್ನು ಪ್ರದಾನ ಮಾಡಿದರು. ಕಾಯಕ್ರಮದಲ್ಲಿ ಸಹೋದರಿಯರಿಂದ ವಿವಿಧ ರೂಪಕಗಳ ಭರತನಾಟ್ಯ ನೃತ್ಯ ನಡೆಯಿತು. ಕಾರ್ಯಕ್ರಮದಲ್ಲಿ ಭರತನಾಟ್ಯ ನೃತ್ಯ ಕಾರ್ಯಕ್ರಮಕ್ಕೆ ಅಕ್ಷತಾ ಉಪಾಧ್ಯಾಯ, ಶಶಿಕಲಾ, ರಮ್ಯಾ ಚೇತನ ಮತ್ತು ಭಾಗ್ಯಲಕ್ಷ್ಮಿ ತಂಡದವರು ಮೃದಂಗ, ವಾಯೋಲಿನ್ ನುಡಿಸುವುದರ ಮೂಲಕ ಸಾಥ್ ನೀಡಿದರು.

  300x250 AD
  Share This
  300x250 AD
  300x250 AD
  300x250 AD
  Back to top