ಅಂಕೋಲಾ: ಸಿದ್ದಾಪುರದಲ್ಲಿ ಪ್ರಣವಾನಂದ ಸ್ವಾಮೀಜಿ ಅವರ ಸಮಾವೇಶ ಜ.19ರಂದು ಸಂಜೆ 4 ಗಂಟೆಗೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜ. 19ರಂದು ಸಿದ್ದಾಪುರ ಪಟ್ಟಣ ಪ್ರವೇಶಿಸಿ ಡೊಳ್ಳು ಸೇರಿದಂತೆ ವಿವಿಧ ವಾದ್ಯಗಳ ಮೆರವಣಿಗೆಯೊಂದಿಗೆ ಸಾಗಿ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಾಮಧಾರಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತಾಗಬೇಕು ಎಂದರು.
ಸಂಘದ ಕಾರ್ಯದರ್ಶಿ ಮೋಹನ ಎಚ್.ನಾಯ್ಕ ಮಾತನಾಡಿ, ಶ್ರೀ ನಾರಾಯಣಗುರು ನಿಗಮ, ಕುಲ ಕಸುಬು ಶೇಂದಿಗೆ ಅವಕಾಶ ಸೇರಿದಂತೆ ಪ್ರಣವಾನಂದ ಶ್ರೀಗಳು ಹಲವು ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ಸರಕಾರದ ಮೇಲೆ ಒತ್ತಡ ತರಲು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಪ್ರತಿಯೊಬ್ಬರೂ ಇಂತಹ ಸಮಾವೇಶದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.
ಶ್ರೀಧರ ನಾಯ್ಕ, ಜ.19ರಂದು ಸಿದ್ದಾಪುರಕ್ಕೆ ತೆರಳಲು ಈಗಾಗಲೇ ವಾಹನದ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಶ್ರೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಎಲ್ಲರೂ ಸೇರಲಿದ್ದಾರೆ. ಆಸಕ್ತರು ಕೂಡ ಇಲ್ಲಿ ಭಾಗವಹಿಸಿ ನಮ್ಮ ಜತೆ ಸಾಗಬಹುದು ಎಂದರು. ಹೆಚ್ಚಿನ ಮಾಹಿತಿಗಾಗಿ ನಾಗೇಶ ನಾಯ್ಕ ಆಚಾ (ಮೊ.ಸಂ: 9482555512), ಗಣಪತಿ ನಾಯ್ಕ ಸೂಪರ (ಮೊ.ಸಂ: 9449126427), ನಾಗರಾಜ ಮಂಜಗುಣಿ (ಮೊ.ಸಂ: 9844384013) ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಸಭೆಯಲ್ಲಿ ಸಮಿತಿಯ ಪ್ರಮುಖರಾದ ಬಾಲಕೃಷ್ಣ ನಾಯ್ಕ, ಕೈಗಾ ರಾಜು, ರಮೇಶ ನಾಯ್ಕ, ವಾಸುದೇವ ನಾಯ್ಕ, ಮಂಜುಳಾ ನಾಯ್ಕ, ಎನ್.ಕೆ.ನಾಯ್ಕ, ಮಂಜುನಾಥ ಕೆ. ನಾಯ್ಕ, ಉದಯ ನಾಯ್ಕ, ಗಣಪತಿ ನಾಯ್ಕ, ಜಟ್ಟಿ ನಾಯ್ಕ, ನಾಗೇಂದ್ರ ನಾಯ್ಕ, ಡಿ.ಜಿ. ನಾಯ್ಕ, ಉಮೇಶ ನಾಯ್ಕ ಗುಡಿಗಾರಗಲ್ಲಿ, ನಾಗರಾಜ ಎಸ್. ನಾಯ್ಕ, ನಾಗರಾಜ ಮಂಜಗುಣಿ ಇತರರು ಇದ್ದರು.