Slide
Slide
Slide
previous arrow
next arrow

ಸಾಹಿತ್ಯ, ಸಾಮಾಜಿಕ ಕ್ಷೇತ್ರಕ್ಕೆ ಸುಜೀತ್ ಕೊಡುಗೆ ಅಪಾರ: ಸುರೇಶ್ ಅಲಗೇರಿ

300x250 AD

ಅಂಕೋಲಾ: ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಎಲೆಮರೆಯ ಕಾಯಿಯಂತೆ ಸುಜೀತ್ ನಾಯ್ಕ ಕೊಡುಗೆ ನೀಡುತ್ತಿದ್ದಾರೆ. ಅವರು ರಚಿಸಿದ ಹಸ್ತಪ್ರತಿಯನ್ನು ಪುಸ್ತಕ ರೂಪದಲ್ಲಿ ತರಲು ನಾನು ವೈಯಕ್ತಿಕವಾಗಿ ಕೊಡುಗೆ ನೀಡುತ್ತೇನೆ ಎಂದು ಉದ್ಯಮಿ ಸುರೇಶ್ ನಾಯ್ಕ ಅಲಗೇರಿ ಹೇಳಿದರು.
ಅವರು ಅವರ್ಸಾದ ದಂಡೆಭಾಗದ ಮ್ಹಾಲಮಾಸ್ತಿ ದೇವಸ್ಥಾನದ ಆವಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀಮ್ಹಾಲಮಾಸ್ತಿ ನವತರುಣ ನಾಟ್ಯ ಮಂಡಳಿ ಅವರ್ಸಾ ಸಂಯುಕ್ತ ಆಶ್ರಯಲ್ಲಿ ಏರ್ಪಡಿಸಿದ್ದ ನಾಟಕ ಪ್ರದರ್ಶನದಲ್ಲಿ ಲೇಖಕ ಸುಜೀತ್ ನಾಯ್ಕ ವಿರಚಿತ 12ನೇ ನಾಟಕಕೃತಿ ‘ರಣಾಂಗಣದಲ್ಲಿ ಪ್ರಾಣಿಗ್ರಹಣ’ ಹಸ್ತಪ್ರತಿ ಬಿಡುಗಡೆಗೊಳಿಸಿ ಮಾತನಾಡಿದರು.
ಕಾರವಾರ ನಗರಸಭೆಯ ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಜೀತ್ ನಾಯ್ಕ ಒಬ್ಬ ಸೃಜನಶೀಲ ಬರಹಗಾರ. ಸಮಕಾಲೀನ ಸಂದರ್ಭದ ನೈಜ ಘಟನೆಯನ್ನು ತೆರೆಯ ಮೇಲೆ ತಂದು ಜನಜಾಗೃತಿಗೊಳಿಸುವ ಕಲಾವಿದನಾಗಿದ್ದಾನೆ ಎಂದರು.
ಗುರುಮನೆಯ ಶ್ರೀಧರ ಗಿರಿಯಪ್ಪ ಮೇತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವರ್ಸಾ ಎಂಬ ಸಾಂಸ್ಕೃತಿಕ ಗ್ರಾಮದಲ್ಲಿ ನಾಗೇಂದ್ರ ಮಹಾದೇವ ನಾಯ್ಕಕುಟುಂಬದವರ ಸಾಮಾಜಿಕ- ಸಾಂಸ್ಕೃತಿಕ- ಧಾರ್ಮಿಕ ಸೇವೆ ಹೆಮ್ಮೆ ತಂದಿದೆ ಎಂದರು.
ಅವರ್ಸಾ ಗ್ರಾ.ಪಂ ಅಧ್ಯಕ್ಷೆ ಸಾರಾ ಕುಟಿನ್ಹೋ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿದರು.
ಬಾಡ ಶ್ರೀದುರ್ಗಾದೇವಿ ನಾಟ್ಯ ಮಂಡಳಿಯ ಅಧ್ಯಕ್ಷ ಮನು ಗುನಗಿ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಕಲಾವಿದ ಮಂಜುನಾಥ ಮುದೇಕÀರ, ಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷಅರುಣ ಶೆಟ್ಟಿ, ಮೊಗಟಾಗ್ರಾಪಂ ಕಾರ್ಯದರ್ಶಿ ಮಹಾಂತೇಶ ಶಿವಲಿಂಣಗಣ್ಣನವರ, ರಂಗಭೂಮಿ ಕಲಾವಿದರ ವೇದಿಕೆಯ ತಾಲೂಕಾಧ್ಯಕ್ಷ ನಾಗರಾಜ್ ಜಾಂಬಳೇಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮ್ಹಾಲಮಾಸ್ತಿ ಅರಣೋದಯ ನವನಾಟ್ಯ ಮಂಡಳಿಯ ವ್ಯವಸ್ಥಾಪಕ, ಪಿಡಿಓ ನಾಗೇಂದ್ರ ನಾಯ್ಕ ಸ್ವಾಗತಿಸಿದರು. ಲೇಖಕ ಸುಜೀತ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಚಕ ಮಹಾದೇವ ನಾಯ್ಕ, ಕಾರ್ಯದರ್ಶಿ ರೋಹಿದಾಸ ನಾಯ್ಕ, ಬುಧವಂತ ವಸಂತ ನಾಯ್ಕ, ಹಿರಿಯ ಕಲಾವಿದ ದಾಮು ಎಮ್.ನಾಯ್ಕ, ದೇವಸ್ಥಾನ ಸಮಿತಿಯ ಸದಸ್ಯ ದಾಮೋದರ ಜೋಗಿ ನಾಯ್ಕ, ನಾಗರಾಜ್ ನಾಯ್ಕ, ಗೋಪಾಲ ನಾಯ್ಕ ಇದ್ದರು.

300x250 AD
Share This
300x250 AD
300x250 AD
300x250 AD
Back to top