ಭಟ್ಕಳ: ಹತ್ತನೇಯ ತರಗತಿಯ ವಾರ್ಷಿಕ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನಿಂದ ಆಯೋಜಿಸಿರುವ ಈ ಪ್ರೇರಣಾ ದ್ವಿತೀಯ ಕಾರ್ಯಕ್ರಮ ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳಲು ಪ್ರೇರಣೆಯಾಗಲಿ ಎಂದು ಮುಂಡಳ್ಳಿ ಪೌಢಶಾಲೆಯ ಮುಖ್ಯಾಧ್ಯಾಪಕ ಡಿ.ಟಿ.ಗೌಡ ಹೇಳಿದರು.
ಅವರು ದಿ ನ್ಯೂ ಇಂಗ್ಲೀಷ ಪಿ.ಯು. ಕಾಲೇಜಿನವರು ಹತ್ತನೇಯ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಪ್ರೇರಣಾ ದ್ವಿತೀಯ’ ಎನ್ನುವ ತಾಲೂಕಿನ ಪ್ರೌಢಶಾಲೆಯಲ್ಲಿ ಓದುತ್ತಿರುವ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳನ್ನು ಕಥೆ ಮತ್ತು ಚಟುವಟಿಕೆಗಳ ಮೂಲಕ ಪ್ರೇರೇಪಿಸಿ ಓದಿನತ್ತ ಗಮನವನ್ನು ಕೇಂದ್ರಿಕರಿಸುವಂತೆ ಮಾಡುವ 2 ಘಂಟೆಗಳ ಕಾರ್ಯಾಗಾರದ ಸರಣಿಯ ಮೊದಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಂಶುಪಾಲರಾದ ಡಾ.ವಿರೇಂದ್ರ ವಿ.ಶ್ಯಾನಭಾಗ, ಉಪನ್ಯಾಸಕರಾದ ಶಿವಾನಂದ ಭಟ್, ವಿಶ್ವನಾಥ ಆಚಾರ್ಯ, ಜಯಂತ ನಾಯ್ಕ ಮತ್ತು ಕೃಷ್ಣಪ್ಪಾ ನಾಯ್ಕ ಭಾಗವಹಿಸಿದ್ದರು.