Slide
Slide
Slide
previous arrow
next arrow

ಮೀನುಗಾರಿಕೆ ಉದ್ಯಮದಲ್ಲಿ ವೈವೀಧ್ಯೀಕರಣ ಕಾರ್ಯಾಗಾರ ಸಂಪನ್ನ

300x250 AD

ಭಟ್ಕಳ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಲೈನಾಕ್ ಪ್ರಾದೇಶಿಕ ತರಬೇತಿ ಕೇಂದ್ರ,ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ, ಮೀನುಗಾರಿಕಾ ಸಚಿವಾಲಯ, ಪಶುಸಂಗೋಪನಾ ಇಲಾಖೆ, ಹೈನುಗಾರಿಕಾ ಇಲಾಖೆ ಮತ್ತು ಸ್ಕೊಡ್‌ವೆಸ್, ಓಶಿಯನ್ ಮೀನುಗಾರಿಕಾ ರೈತ ಉತ್ಪಾದಕ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮೀನುಗಾರ ಮಹಿಳೆಯರಿಗೆ ಮೀನುಗಾರಿಕಾ ಉದ್ಯಮದಲ್ಲಿ ವೈವಿಧ್ಯೀಕರಣ ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರವು ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿಗಳಾದ ಡಾ.ಪ್ರಕಾಶ ಮೇಸ್ತ ಉದ್ಘಾಟಿಸಿ, ಮೀನುಗಾರಿಕೆ ಉದ್ಯಮದಲ್ಲಿನ ವೈವಿಧ್ಯೀಕರಣದ ಕುರಿತು ಮಾತನಾಡುತ್ತ ಸಾಂಪ್ರದಾಯಿಕ ಮೀನುಗಾರಿಕೆಯ ಹೊರತಾಗಿ ಕರಾವಳಿ ತೀರದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಇರುವ ವಿವಿಧ ಸಾಧ್ಯತೆಗಳ ಕುರಿತು ಮಾಹಿತಿ ನೀಡದರಲ್ಲದೇ ಅಕ್ವಾ ಪ್ರವಾಸೋದ್ಯಮದ ಅಭಿವೃದ್ಧಿ ಮತ್ತು ಒಣಮೀನು ವ್ಯಾಪಾರ ವಿಸ್ತರಣೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಪುರಸಭೆಯ ಆರೋಗ್ಯಾಧಿಕಾರಿ ಸೋಜಿಯ ಸುಮನ್ ಮಾತನಾಡಿ, ಮಹಿಳೆಯರು ಛಲ, ಮತ್ತು ಪರಿಶ್ರಮದಿಂದ ಬದುಕನ್ನು ಕಟ್ಟಿಕೊಳ್ಳಬೇಕು ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ನುಡಿದರು. ಸ್ಕೋಡ್‌ವೆಸ್‌ನ ಯೋಜನಾ ವಿಸ್ತಾರಕರಾದ ನೀಲಕಂಠ ಶೇಷಗಿರಿ ಪಿ.ಎಂ.ಎಫ್.ಎಂ.ಇ. ಯೋಜನೆಯ ಕುರಿತು ಮಾಹಿತಿ ನೀಡಿದರು.

ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಹರಿಪ್ರಸಾದ ಪ್ರಾಸ್ತಾವಿಕ ನುಡಿಗಳನ್ನಾಡಿ, ಎನ್.ಸಿ.ಡಿ.ಸಿ. ಸಂಸ್ಥೆಯ ಯೋಜನೆಗಳ ಕುರಿತು ತಿಳಿಸಿದರು. ಭಟ್ಕಳ ಓಶಿಯನ್ ಮೀನುಗಾರಿಕಾ ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ರಮೇಶ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು. ತುಳಸಿ ಖಾರ್ವಿ ಪ್ರಾರ್ಥಿಸಿದರು. ಎರಡು ದಿನಗಳ ಕಾರ್ಯಾಗಾರದಲ್ಲಿ ಡಾ.ಪ್ರಕಾಶ ಮೇಸ್ತ ತಿಳಿಸಿದರೆ, ಪಂಜರ ಕೃಷಿ ಮತ್ತು ನೀಲಿಕಲ್ಲು ಕೃಷಿಯ ಕುರಿತು ಸುದಿನ ಪೂಜಾರಿ ಮಾಹಿತಿ ನೀಡಿದರು. ಸ್ಕೊಡ್‌ವೆಸ್‌ನ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ಸಮುದ್ರ ಪಾಚಿ ಕೃಷಿಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಟ್ಕಳ ಓಶಿಯನ್ ಮೀನುಗಾರಿಕಾ ರೈತ ಉತ್ಪಾದಕ ಕಂಪನಿಯ ಸದಸ್ಯರು ಹಾಗೂ ಮೀನುಗಾರ ಮಹಿಳೆಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top