• Slide
  Slide
  Slide
  Slide
  previous arrow
  next arrow
 • ಚಿಂತನಾಯುಕ್ತವಾದ ವಾತಾವರಣ ನಿರ್ಮಾಣದಿಂದ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ: ಶಿವಾನಂದ ನಾಯಕ

  300x250 AD

  ಅಂಕೋಲಾ: ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ಶೆಟಗೇರಿ ಶಾಲೆಯಲ್ಲಿ 59ನೇ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ ಪ್ರಾಂಶುಪಾಲ ಡಾ.ಶಿವಾನಂದ ವಿ.ನಾಯಕ ವಹಿಸಿಕೊಂಡಿದ್ದರು.
  ಸಮಾಜಕ್ಕೆ ಪೂರಕವಾದ ನಾಗರಿಕರನ್ನು ತಯಾರಿಸಲು ಉತ್ತಮವಾದ ಹಾಗೂ ಪೂರಕವಾದ ಪರಿಸರ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳು ತುಂಬಾ ಚಾಣಾಕ್ಷರಾಗಿದ್ದು ಚರ್ಚೆಯ ವಿಷಯವನ್ನು ಅತ್ಯಂತ ಸ್ಪಷ್ಠತೆಯಿಂದ ಮಂಡಿಸಿದ್ದಾರೆ. ಮೊಬೈಲ್ ಒಂದು ಅಸ್ತ್ರವಿದ್ದಂತೆ, ಅದು ಕಲಿಕೆಯ ಪ್ರಗತಿಗೆ ಪೂರಕವಾಗಿದ್ದು, ಕ್ರಿಯಾಶೀಲತೆ ಚಿಂತನೆಯ ಮುಖಾಂತರ ಜ್ಞಾನವಂತರಾಗಿ ವಿದ್ಯಾರ್ಥಿಗಳನ್ನು ಒತ್ತಡದಿಂದ ದೂರ ಉಳಿಯುವಂತೆ ಮಾಡಿ ಉತ್ತಮವಾದ ನಾಗರಿಕರನ್ನು ಮಾಡಲು ಸಾಧ್ಯ. ಬಾಹ್ಯ ಪರಿಸ್ಥಿತಿಯಲ್ಲಿ ದೋಷವಿದೆ ಅದನ್ನು ಸುಧಾರಿಸಲು ಚಿಂತನಾಯುಕ್ತವಾದ ವಾತಾವರಣ ನಿರ್ಮಾಣವಾದರೆ ಮಾತ್ರ ಶೈಕ್ಷಣಿಕ ಅಭಿವೃದ್ಧಿಯಾಗಲು ಸಾಧ್ಯ ಎಂದು ಡಾ. ಶಿವಾನಂದ ವಿ. ನಾಯಕ ಅಭಿಪ್ರಾಯಪಟ್ಟರು.
  ನಿರ್ಣಾಯಕರಾಗಿ ಆಗಮಿಸಿದ ಪಿ.ಎಂ. ಪದವಿಪೂರ್ವ ಕಾಲೇಜು ಉಪನ್ಯಾಸಕ ಉಲ್ಲಾಸ ಹುದ್ದಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗ್ರಹಿಕಾ ಶಕ್ತಿ ಇದ್ದು ವೈಜ್ಞಾನಿಕವಾದಂತ ಸೃಜನಶೀಲತೆಯಿಂದ ಕೂಡಿದ ಪರಿಸರದಲ್ಲಿ ಬೆಳೆಯುವಂತೆ ಆಗಬೇಕು ಅಂದರೆ ಮಾತ್ರ ಮಾನವೀಯ ಮೌಲ್ಯಗಳನ್ನು ಬೆಳೆಸಿ ಉತ್ತಮ ಪ್ರಜೆಗಳನ್ನು ಮಾಡಲು ಸಾಧ್ಯ ಎಂದು ಹೇಳಿದರು.
  ಇನ್ನೋರ್ವ ನಿರ್ಣಾಯಕ ನಿವೃತ್ತ ಮುಖ್ಯಾಧ್ಯಾಪಕ ದಿನಕರ ಎನ್.ನಾಯಕ ಮಾತನಾಡಿ, ಮಕ್ಕಳ ಬಾಹ್ಯ ಬೆಳವಣಿಗೆಗೆ ಉತ್ತಮವಾದ ಪರಿಸರದ ಅವಶ್ಯಕತೆ ಇದೆ. ವಿದ್ಯಾರ್ಥಿಯು ಹಾಳಾಗದಂತೆ ಪಾಲಕರ, ಶಿಕ್ಷಕರ ಮುಂಜಾಗೃತೆ ವಹಿಸುವ ಅವಶ್ಯಕತೆ ಇದೆ. ಹಂಸವು ಹೇಗೆ ನೀರಿನಲ್ಲಿರುವ ಹಾಲನ್ನು ಮಾತ್ರ ಕುಡಿದು ನೀರನ್ನು ಉಳಿಸುತ್ತದೆ. ಅದರಂತೆ ವಿದ್ಯಾರ್ಥಿಗಳು ಒಳ್ಳೆಯತನವನ್ನು ಬೆಳೆಸಿಕೊಂಡರೆ ಮಾತ್ರ ಪ್ರಾಮಾಣಿಕ ಆಗಬಲ್ಲರು ಎಂದು ಹಿತವಚನ ನುಡಿದರು.
  ಮತ್ತೊಬ್ಬ ನಿರ್ಣಾಯಕರಾಗಿ ಆಗಮಿಸಿದ್ದ ಕೆ.ಪಿ.ಎಸ್ ಅಗಸೂರು ಕಾಲೇಜಿನ ಉಪನ್ಯಾಸಕ ಗಣಪತಿ ಎಚ್.ನಾಯಕ ಮಾತನಾಡಿ, ಮಕ್ಕಳಲ್ಲಿ ಮಾತನಾಡುವ ಶೈಲಿ ಉತ್ತಮವಾಗಿದ್ದು ಅದನ್ನು ಅಭಿವೃದ್ಧಿ ಪಡಿಸಲು ವಿಷಯ ಜ್ಞಾನದ ಅವಶ್ಯಕತೆಯಿದೆ. ಪೂರ್ವ ಜ್ಞಾನ, ಸಮಯಪ್ರಜ್ಞೆ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು. ಒಂದು ಪುಟ್ಟ ಹಣತೆ ತನ್ನ ವ್ಯಾಪ್ತಿಗೆ ತಕ್ಕಂತೆ ಬೆಳಕನ್ನು ಚೆಲ್ಲುತ್ತದೆ. ಹಾಗೆ ತಾವು ಕೂಡ ಸ್ವಲ್ಪ ಸ್ವಲ್ಪ ಜಾನವನ್ನು ಪಡೆದು ಪ್ರಜ್ಞಾವಂತ ಪ್ರಜೆಗಳಾಗಿ ದೇಶಕ್ಕೆ ಕೀರ್ತಿ ತನ್ನಿ ಎಂದು ಹಿತವಚನ ನುಡಿದರು.
  ವೇದಿಕೆ ಮೇಲೆ ನಮ್ಮ ಶಿಕ್ಷಣ ಸಮಿತಿಯ ಅಧ್ಯಕ್ಷ ರಮಾನಂದ ಬಿ.ನಾಯಕ, ಗೌರವಾಧ್ಯಕ್ಷ, ಹಿರಿಯ ಸಾಹಿತಿ ಶಾಂತಾರಾಮ ನಾಯಕ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರ ಸ್ವಾಗತಗೀತೆಯೊಂದಿಗೆ ಪ್ರಾರಂಭವಾಯಿತು. ಶಾಲೆಯ ಮುಖ್ಯಾಧ್ಯಾಪಕ ಎನ್.ವಿ.ರಾಠೋಡ ಅವರು ಅತಿಥಿಗಳು ಹಾಗೂ ಅಧ್ಯಕ್ಷರನ್ನು ಪರಿಚಯಿಸಿ ಸ್ವಾಗತಿಸಿದರು.
  ಚರ್ಚೆಯ ವಿಷಯ: ಇಂದಿನ ವಿದ್ಯಾರ್ಥಿಗಳ ಕಲಿಕೆಗೆ ಮೊಬೈಲ್ ಬಳಕೆ ಅನಿವಾರ್ಯ ಎಂಬುದಾಗಿತ್ತು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕ ಎಂ.ಎಸ್.ದೇವಾಡಿಗ ನಿರ್ವಹಿಸಿದರು. ಬಹುಮಾನ ಇಟ್ಟವರ ಯಾದಿಯನ್ನು ಶಿಕ್ಷಕಿ ಶಾಂತಲಾ ನಾಯಕ ಓದಿದರು. ಶಿಕ್ಷಕ ರಾಜು ಜಿ.ಶೇಡಗೇರಿ ಅಭಿನಂದನೆ ಸಲ್ಲಿಸಿದರು.
  ಪ್ರಥಮ ಬಹುಮಾನ ಸಿಂಚನಾ ಸಂಜೀವ ನಾಯ್ಕ ಪಿ.ಎಂ.ಪ್ರೌಢಶಾಲೆ ಅಂಕೋಲಾ, ದ್ವಿತೀಯ ಬಹುಮಾನ ರಕ್ಷಿತಾ ರಮೆಶ ನಾಯ್ಕ ಎಸ್.ಕೆ.ಪಿ.ಪ್ರೌಢಶಾಲೆ ಅರೇಅಂಗಡಿ ಹೊನ್ನಾವರ, ತೃತೀಯ ಬಹುಮಾನ ಮಿಲನಾ ಮಹೇಶ ನಾಯ್ಕ ಇಂದಿರಾಗಾಂಧಿ ವಸತಿ ಪ್ರೌಢಶಾಲೆ ಹೊನ್ನೆಕೇರಿ ಅಂಕೋಲಾ, ನಾಲ್ಕನೇ ಬಹುಮಾನ ತೇಜಾ ಎನ್. ಪಿ ಎಸ್.ಕೆ.ಪಿ ಪ್ರೌಢಶಾಲೆ ಅರೇಅಂಗಡಿ ಹೊನ್ನಾವರ, ಐದನೇ ಬಹುಮಾನ ಭಾರತಿ ನಾಯ್ಕ ಇಂದಿರಾಗಾಂಧಿ ವಸತಿ ಪ್ರೌಢಶಾಲೆ ಹೊನ್ನೆಕೇರಿ ಅಂಕೋಲಾ ಇವರು ಪಡೆದರು. ಅತಿ ಹೆಚ್ಚು ಅಂಕ ಪಡೆದುಕೊಂಡು ಎಸ್.ಕೆ.ಪಿ ಪ್ರೌಢ ಶಾಲೆ ಅರೇಅಂಗಡಿ ಹೊನ್ನಾವರ ಅವರು ರೋಲಿಂಗ್ ಶೀಲ್ಡನ್ನು ಪಡೆದುಕೊಂಡರು. ಈ ಚರ್ಚಾಸ್ಪರ್ಧೆಗೆ ಜಿಲ್ಲೆಯ 15 ಪ್ರೌಢಶಾಲೆಯ ಸ್ಪರ್ಧಾಳುಗಳು ಭಾಗವಹಿಸಿದ್ದರು. ಆಡಳಿತ ಮಂಡಳಿಯ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top