ಹೊನ್ನಾವರ: ತಾಲೂಕಿನ ಎಂ.ಪಿ.ಇ. ಸೊಸೈಟಿ ಕೇಂದ್ರೀಯ ವಿದ್ಯಾಲಯಲ್ಲಿ ನಡೆದ ಕದಂಬ ಸಹೋದಯ ಸಿಬಿಎಸ್ಇ ಇಂಟರ್ ಸ್ಕೂಲ್ ಉತ್ತರ ಕನ್ನಡ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನಿನ 29 ವಿದ್ಯಾರ್ಥಿಗಳು ಭಾಗವಹಿಸಿ 5 ವಿದ್ಯಾರ್ಥಿಗಳು ಪ್ರಥಮ, 8 ವಿದ್ಯಾರ್ಥಿಗಳು ದ್ವಿತೀಯ ಹಾಗೂ 4X100ಮೀ. ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದು ತಮ್ಮ ಅಪ್ರತಿಮ ಸಾಧನೆಯನ್ನು ಮೆರೆಯುವ ಮೂಲಕ ರನ್ನರ್ ಅಪ್ ಸ್ಥಾನ ಪಡೆದುಕೊಂಡು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
14ವರ್ಷದೊಳಗಿನ ಬಾಲಕ-ಬಾಲಕಿಯರ ವಿಭಾಗದಲ್ಲಿ ನಿಶ್ಚಿತಾ ಮಹೇಶ ಶೆಟ್ಟಿ 100ಮೀ. ಓಟದಲ್ಲಿ ಪ್ರಥಮ, 400ಮೀ. ಓಟದಲ್ಲಿ ದ್ವಿತೀಯ, ಎನ್. ರಿಶ್ಮಿತಾ 100ಮೀ. ಓಟದಲ್ಲಿ ದ್ವಿತೀಯ, ಪ್ರಥಮ ಕೃಷ್ಣ ನಾಯ್ಕ 400ಮೀ. ಓಟದಲ್ಲಿ ದ್ವಿತೀಯ ಹಾಗೂ ಶ್ರೇಯಸ್ ವಿನಾಯಕ ಭೋಮ್ಕರ್ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡಿದ್ದಾರೆ.
17ವರ್ಷದೊಳಗಿನ ಬಾಲಕ-ಬಾಲಕಿಯರ ವಿಭಾಗದಲ್ಲಿ ಸುಮಿತ್ ನಾಗರಾಜ ನಾಯ್ಕ 100ಮೀ. ಓಟದಲ್ಲಿ ಪ್ರಥಮ, ರವಿರಾಜ ಆನಂದ ಗೌಡ 100ಮೀ. ಓಟದಲ್ಲಿ ದ್ವಿತೀಯ, ಅಕ್ಷಯ ಅಶೋಕ ಭಂಡಾರಿ 400ಮೀ. ಓಟದಲ್ಲಿ ದ್ವಿತೀಯ, ರಿದ್ಧಿ ರಾಮರಾಜ ಶೇಟ್ 100ಮೀ. ಓಟದಲ್ಲಿ ಪ್ರಥಮ, 400ಮೀ. ಓಟದಲ್ಲಿ ಪ್ರಥಮ ಹಾಗೂ 4X100ಮೀ. ರೀಲೆಯಲ್ಲಿ ಪ್ರಥಮ ಮಹಿಮಾ ಆರ್. ನಾಯಕ 100ಮೀ. ಓಟದಲ್ಲಿ ದ್ವಿತೀಯ, 400ಮೀ. ಓಟದಲ್ಲಿ ದ್ವಿತೀಯ ಹಾಗೂ 4X100ಮೀ. ರೀಲೆಯಲ್ಲಿ ಪ್ರಥಮ, ಸಂಜನಾ ಎಂ. ಜಿ ಹಾಗೂ ಪೂರ್ವಿ ಕೇಶವ ನಾಯ್ಕ 4X100ಮೀ. ರೀಲೆಯಲ್ಲಿ ಪ್ರಥಮ ಸ್ಥಾಗಳಿಸಿಕೊಂಡಿದ್ದಾರೆ.
14ವರ್ಷದೊಳಗಿನ ವಿಭಾಗದಲ್ಲಿ ವೈಯಕ್ತಿಕ ವೀರಾಗ್ರಣಿ ಬಾಲಕಿಯಾಗಿ ನಿಶ್ಚಿತಾ ಮಹೇಶ ಶೆಟ್ಟಿ ಹಾಗೂ 17ವರ್ಷದೊಳಗಿನ ವಿಭಾಗದಲ್ಲಿ ರಿದ್ಧಿ ರಾಮರಾಜ ಶೇಟ್ ವೈಯಕ್ತಿಕ ವೀರಾಗ್ರಣಿ ಬಾಲಕಿಯಾಗಿ ಹೊರಹೊಮ್ಮಿದ್ದಾರೆ.
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲಾ ಶಾಖಾಮಠದ ಪೂಜ್ಯರಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು, ಮಿರ್ಜಾನ್ ಶಾಖಾಮಠದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು, ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಲೀನಾ ಎಂ. ಗೊನೇಹಳ್ಳಿ ಹಾಗೂ ಶಿಕ್ಷಕ ವೃಂದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ನಾಯಕ ಮತ್ತು ಶ್ರೀಮತಿ ನಾಗರತ್ನ ನಾಯ್ಕರವರನ್ನು ಅಭಿನಂದಿಸಿದ್ದಾರೆ.