Slide
Slide
Slide
previous arrow
next arrow

ಜ.12ಕ್ಕೆ ಶ್ರೀನಿಕೇತನದಲ್ಲಿ ‘ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ’

300x250 AD

ಶಿರಸಿ:   ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿರಸಿ, ಶ್ರೀ ಶ್ರೀನಿಕೇತನ ವಿದ್ಯಾ ಸಂಸ್ಥೆ ಇಸಳೂರು ಮತ್ತು ಶಿರಸಿ ತಾಲೂಕಾ ಭಾರತ ಸೇವಾದಳ ಸಮಿತಿ ಇವರ ಆಶ್ರಯದಲ್ಲಿ ಭಾರತ ಸೇವಾದಳ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳವನ್ನು ಜ.12, ಗುರುವಾರ ತಾಲೂಕಿನ ಇಸಳೂರಿನ ಶ್ರೀನಿಕೇತನ ಶಾಲೆಯಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಇವರ ದಿವ್ಯ ಉಪಸ್ಥಿತಿಯಲ್ಲಿ, ಉದ್ಘಾಟಕರಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ‌‌ ಆಗಮಿಸಲಿದ್ದು‌, ಕಾರ್ಮಿಕ ಸಚಿವ‌ ಶಿವರಾಮ ಹೆಬ್ಬಾರ್, ಭಾರತ ಸೇವಾದಳ ರಾಜ್ಯ ಸಮಿತಿ‌ಅಧ್ಯಕ್ಷ ಶಂಕರ ಮುಗದ ಗೌರವ ಉಪಸ್ಥಿತಿ ನೀಡಲಿದ್ದಾರೆ.ಅಧ್ಯಕ್ಷತೆಯನ್ನು ಜಿಲ್ಲಾ ಭಾರತ ಸೇವಾದಳ ಸಮಿತಿ ಅಧ್ಯಕ್ಷ ವಿ.ಎಸ್.ನಾಯಕ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಇಸಳೂರು ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ಭಟ್, ನಗರ ಸಭೆ ಅಧ್ಯಕ್ಷ ಗಣಪತಿ ನಾಯ್ಕ, ಸಹಾಯಕ ಆಯುಕ್ತ ದೇವರಾಜ್ ಆರ್, ಪಿ.ಬಸವರಾಜ್, ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಎಪಿಎಂಸಿ ಅಧ್ಯಕ್ಷ ‌ಪ್ರಶಾಂತ ಗೌಡ್ರು,ಶ್ರೀನಿಕೇತನ ಶಾಲಾ ಅಧ್ಯಕ್ಷ ಮೇ.ರಘುನಂದನ ಹೆಗಡೆ, ಪ್ರಾಂಶುಪಾಲ ವಸಂತ್ ಭಟ್‌ ಆಗಮಿಸಲಿದ್ದಾರೆ.

ಮಧ್ಯಾಹ್ನದ ಕಾರ್ಯಕ್ರಮದಲ್ಲಿ ನಿವೃತ್ತ ಶಾಖಾ ನಾಯಕ, ನಾಯಕಿಯರಿಗೆ ಗೌರವಾರ್ಪಣೆ ಮತ್ತು‌ ಪ್ರಶಸ್ತಿ‌ ಪತ್ರ ವಿತರಣಾ ಸಮಾರಂಭವು  ನಡೆಯಲಿದೆ.

300x250 AD

ಸಮಾರೋಪ ಸಮಾರಂಭದಲ್ಲಿ ಸಿಪಿಐ ರಾಮಚಂದ್ರ ನಾಯಕ್ ವಂದನೆ ಸ್ವೀಕಾರ ಪಡೆಯಲಿದ್ದು, ಭಾರತ ಸೇವಾದಳ ತಾಲೂಕಾ ಸಮಿತಿ‌ ಅಧ್ಯಕ್ಷ ಅಶೋಕ ಭಜಂತ್ರಿ, ಭೀಮಣ್ಣ ಟಿ.ನಾಯ್ಕ್ ಹಾಗೂ ಇತರ ಗಣ್ಯರು  ಉಪಸ್ಥಿತರಿರಲಿದ್ದಾರೆ.

Share This
300x250 AD
300x250 AD
300x250 AD
Back to top