Slide
Slide
Slide
previous arrow
next arrow

ರಾಜಕೀಯವಾಗಿ ಅವಕಾಶ ಸಿಕ್ಕರೆ ಶಿಕ್ಷಣಕ್ಕೆ ಮೊದಲ ಆದ್ಯತೆ: ಚೈತ್ರಾ ಕೊಠಾರಕರ್

300x250 AD

ಅಂಕೋಲಾ: ರಾಜಕೀಯವಾಗಿ ಮುಂದಿನ ದಿನದಲ್ಲಿ ಒಳ್ಳೆಯ ಅವಕಾಶ ಸಿಕ್ಕರೇ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆಯನ್ನ ಕೊಡಲಾಗುವುದು ಎಂದು ಮಾಜಿ ಜಿಲ್ಲಾ ಪಂಚಾಯತ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ್ ಹೇಳಿದರು.
ಪಟ್ಟಣದ ಲಕ್ಷ್ಮೇಶ್ವರದ ಡಾ.ದಿನಕರ ದೇಸಾಯಿ ಸ್ಮಾರಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಬದುಕಿಗೆ ಶಿಕ್ಷಣವೇ ಅತಿಮುಖ್ಯ. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ನನ್ನ ಪ್ರಯತ್ನ ಇರುತ್ತದೆ ಎಂದರು.
ನಾನು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದಾಗ ಕೋವಿಡ್ ಎದುರಾಗಿತ್ತು. ಡಿಜಿಟಲ್ ತರಗತಿಗಳನ್ನ ಎಲ್ಲಾ ಕಡೆ ಮಾಡಬೇಕು ಎನ್ನುವ ಬಯಕೆ ನನ್ನದಾಗಿತ್ತು. ಕೇವಲ ಕಾರವಾರ ತಾಲೂಕಿನ ತೋಡುರು ಗ್ರಾಮದ ಶಾಲೆಯಲ್ಲಿ ಮಾತ್ರ ಜಿಲ್ಲಾ ಪಂಚಾಯತಿಯಿoದ ಡಿಜಿಟಲ್ ತರಗತಿ ಮಾಡಲಾಯಿತು.
ಕೋವಿಡ್ ಇದ್ದಿದ್ದರಿಂದ ಹೆಚ್ಚು ಕೆಲಸ ಮಾಡಲು ಆಗಿರಲಿಲ್ಲ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ತರಗತಿ ತೆಗೆಯಬೇಕು ಎನ್ನುವ ಬಯಕೆ ತನ್ನದಾಗಿತ್ತು. ಮುಂದೆ ರಾಜಕೀಯವಾಗಿ ಒಳ್ಳೆಯ ಅವಕಾಶಗಳು ಸಿಕ್ಕರೇ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ಕೊಡುತ್ತೇನೆ ಎಂದರು. ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ಕೊಡಬೇಕು. ಕೋವಿಡ್ ಬಂದ ನಂತರದಿoದ ಮೊಬೈಲ್ ಬಳಕೆಗೆ ವಿದ್ಯಾರ್ಥಿಗಳು ಹೆಚ್ಚು ಒತ್ತನ್ನ ಕೊಡುತ್ತಿದ್ದಾರೆ. ಇದನ್ನ ದೂರ ಮಾಡಲು ಪಠ್ಯೇತರ ಚಟುವಟಿಕೆಗೆ ಹೆಚ್ಚು ಆದ್ಯತೆ ಕೊಡಬೇಕಾಗಿದೆ. ಪೋಷಕರು ಹಾಗೂ ಶಿಕ್ಷಕರು ಇದಕ್ಕೆ ಹೆಚ್ಚು ಗಮನಹರಿಸಬೇಕಾಗಿದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತನ್ನದೇ ಆದ ಕೌಶಲ್ಯವಿರುತ್ತದೆ. ಅದನ್ನ ಗುರುತಿಸುವ ಕೆಲಸ ಪೋಷಕರು ಹಾಗೂ ಶಿಕ್ಷಕರು ಮಾಡಬೇಕು. ವಿದ್ಯಾರ್ಥಿಯ ಕೌಶಲ್ಯ ಗುರುತಿಸಿ ಆತನಿಗೆ ಬೆಂಬಲ ನೀಡಿದರೆ ಮುಂದೆ ಸಾಧನೆ ಮಾಡಲು ಸಹಕಾರಿಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ದಿನಕರ ದೇಸಾಯಿ ಅವರು ನೀಡಿದ ಕೊಡುಗೆ ಇಂದಿಗೂ ಎಲ್ಲರೂ ನೆನೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ. ನಿತಿನ ಹೊಸಮೇಲಕರ, ಕಾರ್ಮಿಕ ನಿರೀಕ್ಷಕರಾದ ಆರ್ ತೀರ್ಥಬಾಬು, ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top