• Slide
    Slide
    Slide
    previous arrow
    next arrow
  • ಸರ್ಕಾರಿ ಬೆಟ್ಟ ಅತಿಕ್ರಮಣ; ಸ್ಥಳೀಯರ ಆರೋಪ

    300x250 AD

    ಸಿದ್ದಾಪುರ: ತಾಲೂಕಿನ ಮುಠ್ಠಳ್ಳಿ ಗ್ರಾಮದ ಸರ್ಕಾರಿ ಬೆಟ್ಟ ಸರ್ವೆ ನಂ.275 ಹಾಗೂ 277ರಲ್ಲಿ ಸ್ಥಳೀಯವಾಗಿ ಭಾಗಾಯ್ತ ಇರುವ ಹಕ್ಕುದಾರರಿಗೆ ಬಳಕೆಗೆ ಅವಕಾಶ ಮಾಡಿಕೊಡಬೇಕು. ಆದರೆ ಇಲ್ಲಿ ಎರಡು ಮೂರು ಜನ ಮಾತ್ರ ಬಳಕೆ ಮಾಡಿಕೊಳ್ಳುತ್ತ ಅಲ್ಲಿ ಅಡಕೆ ಹಾಗೂ ತೆಂಗಿನ ಸಸಿಗಳನ್ನು ನೆಟ್ಟಿದ್ದು, ಅದನ್ನು ತೆರವುಗೊಳಿಸಬೇಕೆಂದು ಓಣಿತೋಟದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
    ಸರ್ವೆ ನಂ 275 ಹಾಗೂ 277ರಲ್ಲಿ ಹುಬ್ಬಗೈನ ಮಂಜುನಾಥ ನಾಯ್ಕ ಹಾಗೂ ಸಹೋದರರು ಜೆಸಿಬಿ ಯಂತ್ರ ಬಳಸಿ ತೋಟ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ ಅಲ್ಲಿದ್ದ ಕೆಲವು ಕಾಡು ಜಾತಿ ಗಿಡ-ಮರಗಳನ್ನು ಕಟಾವು ಮಾಡಿದ್ದಾರೆ. ಆದರೆ ಈ ಎರಡು ಸರ್ವೆ ನಂ ಸರ್ಕಾರಿ ಬೆಟ್ಟದಲ್ಲಿ ಸರ್ವೆ ನಂ 281,282,256, 242, 245,246, 247,248,249,250, 252/1-2-3, 254/1-2, 255,258/1-2-3, ಭಾಗಾಯ್ತಕ್ಕೆ ಸಂಬoಧ ಪಟ್ಟ ಬೆಟ್ಟದ ಸರ್ವೆ ನಂ ಆಗಿದೆ. ಭಾಗಾಯತಕ್ಕೆ ಸಂಬoಧ ಪಟ್ಟವರನ್ನು ಹೆದರಿಸಿ ಅವರು ತಮ್ಮ ಸ್ವಂತ ಜಾಗದಂತೆ ವರ್ತಿಸುತ್ತಿದ್ದಾರೆ. ಅಲ್ಲದೇ ಸರ್ವೆ ನಂ . 275, 277ರಲ್ಲಿ ನೂರಾರು ವರ್ಷಗಳಿಂದ ರುದ್ರಭೂಮಿಯಾಗಿಯೂ ಬಳಕೆ ಆಗುತ್ತಿದೆ. ಈಗ ಅವರು ಇದಕ್ಕೂ ನಮಗೆ ಆತಂಕ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
    ಕಾಡು ಜಾತಿ ಗಿಡ-ಮರಗಳನ್ನು ಕಡಿದಿರುವ ಕುರಿತು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ದೂರನ್ನು ನೀಡಲಾಗಿದೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಹೋದ ನಂತರ ಈ ಜಾಗದಲ್ಲಿ ಯಾವುದೇ ಗಿಡ-ಮರಗಳನ್ನು ಕಡಿಯಲಿಲ್ಲ. ಆದರೆ ಈಗಾಗಲೇ ಈ ಎರಡೂ ಸರ್ವೆ ನಂನಲ್ಲಿ ಅವರು ನೆಟ್ಟಿರುವ ಅಡಕೆ ಸಸಿ ಹಾಗೂ ತೆಂಗಿನ ಗಿಡಗಳನ್ನು ಸಂಬoಧ ಪಟ್ಟ ಇಲಾಖೆಯವರು ತೆರವುಗೊಳಿಸಿ ಸಂಬoಧ ಪಟ್ಟ ಭಾಗಾಯತದಾರರು ಇದರ ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ಓಣಿತೋಟದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
    ಓಣಿತೋಟದ ನರೇಂದ್ರ ಎಂ.ಗೌಡ, ಶಿವಾ ಗೌಡ, ಸುಬ್ರಾಯ ಗೌಡ, ಅಣ್ಣಪ್ಪ ಶೆಟ್ಟಿ, ಸುರೇಶ ಬಿ.ಗೌಡ, ತಿಮ್ಮಪ್ಪ ಗೌಡ, ರಾಮಚಂದ್ರ ಗೌಡ, ವಾಸುದೇವ ಶೆಟ್ಟಿ, ಕಮಲಾಕರ ಶೆಟ್ಟಿ,ರಾಘವೇಂದ್ರ, ಗೌತಮ, ಅಕ್ಷಯ ಗೌಡ, ಎಸ್.ಎಂ.ಪಾಟೀಲ್ ಬಂದಿಸರ ಇತರರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top