• Slide
  Slide
  Slide
  previous arrow
  next arrow
 • ಅಡಿಕೆ, ಇತರ ಬೆಳೆಗಳ ಕುರಿತು ರೈತ ಸಂವಾದ ಕಾರ್ಯಕ್ರಮ

  300x250 AD

  ಸಿದ್ದಾಪುರ: ತಾಲ್ಲೂಕಿನ ಬಿಳಗಿಯ ಭಾಗ್ಯವಿದಾತ ರೈತ ಉತ್ಪಾದಕ ಸಂಸ್ಥೆ, ಸ್ಕೋಡ್‌ವೆಸ್ ಸಂಸ್ಥೆಯ ಸಹಯೋಗದಲ್ಲಿ ಅಡಿಕೆ ಮತ್ತು ಇತರ ಬೆಳೆಗಳ ಸಮಗ್ರ ವಿಚಾರದ ಕುರಿತು ರೈತ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
  ತಾಲ್ಲೂಕಿನ ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾಗ್ಯವಿಧಾತ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಪ್ರಸನ್ನ ಹೆಗಡೆ ನೇರ್ಗಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮಂಜುನಾಥ ಕೃಷಿ ಬೆಳೆಗಳ ಕುರಿತು ಹಾಗೂ ರೋಗ ನಿರ್ವಹಣೆಯ ಕುರ್ತು ರೈತರೊಂದಿಗೆ ಸಂವಾದ ನಡೆಸಿ ರೈತರ ಸಮಸ್ಯೆಗಳಿಗೆ ಮತ್ತು ಸಂಶಯಗಳಿಗೆ ಸೂಕ್ತ ಪರಿಹಾರ ನೀಡಿದರು.
  ಸಭೆಯಲ್ಲಿ ನಿರ್ದೇಶಕ ಪರಮೇಶ್ವರ ಭಟ್ಟ ಮುತ್ತಿಗೆ, ಶ್ರೀಧರ ಹೆಗಡೆ ನೇರಗಾಲ್ ಇದ್ದರು. ಭಾಗ್ಯವಿದಾತ ಸಂಸ್ಥೆಯ ಸಿಬ್ಬಂದಿ ಪ್ರಥಮ ಹೆಗಡೆ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಹೆಗಡೆ ಸ್ವಾಗತಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top