ಯಲ್ಲಾಪುರ: ‘ವರ್ಷಂಪ್ರತಿ ನಮ್ಮ ಸಾಹಿತ್ಯಾರಾಧನ’ ಸಂಸ್ಥೆ ಕೊಡಮಾಡುತ್ತಿರುವ ಶ್ರೀಗಂಧಹಾರ ಪ್ರಶಸ್ತಿಗೆ ಹಿರಿಯ ಲೇಖಕ, ಕವಿ, ಸಾಹಿತಿ, ಕತೆಗಾರ ವನರಾಗ ಶರ್ಮಾ ಆಯ್ಕೆಯಾಗಿದ್ದಾರೆ.
ಅವರ ಮಧುರ ರಾಮಾಯಣ ಕೃತಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, 10 ಸಾವಿರ ರೂಪಾಯಿ ನಗದು ಸಹಿತ ಪ್ರಶಸ್ತಿ ಫಲಕ ಹೊಂದಿದೆ. 2023 ಜ.2ರಂದು ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕ ಮಾಸ್ಕೇರಿ ನಾಯಕ ತಿಳಿಸಿದ್ದಾರೆ.
ದಾಂಡೇಲಿಯ ಮಾಸ್ಕೇರಿ ಸಾಹಿತ್ಯ ಪ್ರತಿಷ್ಠಾನ ಅಡಿಯಲ್ಲಿ, ವಕೀಲ ರವಿ ಹೆಗಡೆ ಹೂವಿನಮನೆ, ಸಮಾಜ ಸೇವಕ ಶಂಕರ ಮುಂಗರವಾಡಿ, ಯು.ಡಿ.ನಾಯ್ಕ, ಹಾಸ್ಯ ಕವಿ ಶಿಸ್ತಮುಡಿ ವಿಶ್ವನಾಥ ಭಾಗವತ, ಸಾಹಿತಿ ರವಿ ಲಕ್ಷ್ಮೇಶ್ವರ, ಗಣಪತಿ ಕಂಚಿಪಾಲ, ಭಾರತಿ ಕವರಿ, ಗುರುರಾಜ ನಾಯಕ, ಐಶ್ವರ್ಯ ಗುರುರಾಜ,ಉಪನ್ಯಾಸಕಿ ನಿರೂಪಮಾ ನಾಯಕ, ವಕೀಲ ಜಯಾ ಎನ್., ವಕೀಲ ಸತೀಶ ಪ್ರಸಾದ (ಬೆಂಗಳೂರು) ಆಯ್ಕೆ ಸಮಿತಿ ಪ್ರಮುಖರು ವನರಾಗ ಶರ್ಮ ಅವರನ್ನು ಆಯ್ಕೆ ಮಾಡಿದ್ದಾರೆ.