ಶಿರಸಿ: ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ 2022- 23ನೇ ಸಾಲಿನ ದತ್ತಿನಿಧಿ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಡಿ. 22,ಗುರುವಾರದಂದು ಏರ್ಪಡಿಸಲಾಗಿತ್ತು. 2021- 22ನೇ ಸಾಲಿನ ಎಸ್ ಎಸ್ ಎಲ್ ಸಿಯಲ್ಲಿ ವಿಷಯವಾರು ಸಾಧಕ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಗಣ್ಯರು ಇರಿಸಿದ ದತ್ತಿ ನಿಧಿಯನ್ನು ವಿತರಿಸಲಾಯಿತು. ಜೊತೆಗೆ ಪ್ರಸಕ್ತ ಸಾಲಿನ ಎಲ್.ಕೆ.ಜಿ ಯಿಂದ 10ನೇ ತರಗತಿಯ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಜೊತೆಗೆ ‘ಎಲ್ಐಸಿ ಸ್ಟೂಡೆಂಟ್ ಆಫ್ ದ ಇಯರ್’ ಪ್ರಶಸ್ತಿಯನ್ನು ಕೂಡ ಒಂದನೇ ತರಗತಿಯಿಂದ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡಲಾಯಿತು.
ರಾಷ್ಟ್ರ ಪುರಸ್ಕೃತ ನಿವೃತ್ತ ಶಿಕ್ಷಕರಾದ ಎಸ್.ಎಸ್.ಭಟ್ಕ ಕಾಗಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಯಾವುದೇ ಕೆಲಸವನ್ನು ಮಾಡುವಾಗ ನಿಷ್ಠೆ, ತಾಳ್ಮೆ ಮತ್ತು ಸತತ ಪ್ರಯತ್ನದಿಂದ ಮಾಡಿದರೆ ಯಶಸ್ಸನ್ನು ಸಾಧಿಸಬಹುದು ಎನ್ನುವ ಹಲವಾರು ಕಿವಿ ಮಾತುಗಳೊಂದಿಗೆ ಮಕ್ಕಳನ್ನು ಹುರಿದುಂಬಿಸುತ್ತಾ ಬಹುಮಾನ ವಿತರಿಸಿದರು. ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ಲ.ಪ್ರೊ. ರವಿ ನಾಯಕ್ ರವರು ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಲಯನ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಪ್ರೊಫೆಸರ್ ಎನ್.ವಿ.ಜಿ.ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಎಂ. ಜೆ .ಎಫ್.ಲಯನ್ ಪ್ರಭಾಕರ್ ಹೆಗಡೆ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ. ಜೆ. ಎಫ್. ಲಯನ್ ತ್ರಿವಿಕ್ರಂ ಪಟವರ್ಧನ್, ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ಎಂ. ಜೆ .ಎಫ್. ಲಯನ್ ರಮಾ ಪಟವರ್ಧನ್, ಲಯನ್ಸ್ ಎಜುಕೇಶನ್ ಸೊಸೈಟಿಯ ಸದಸ್ಯರಾದ ಲ.ಕೆ.ಬಿ.ಲೊಕೇಶ್ ಹೆಗಡೆ, ಲ. ಶ್ಯಾಮಸುಂದರ್ ಭಟ್, ಲಯನ್ ಅಶ್ವಥ್ ಹೆಗಡೆ ಲಿಯೋ ಅಡ್ವೈಸರ್, ಎಂ ಜೆ ಎಫ್.ಲ. ಜ್ಯೋತಿ ಭಟ್ ಹಾಗೂ ಇನ್ನಿತರ ಲಯನ್ಸ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಶಾಲೆಯ ಸಂಗೀತ ಶಿಕ್ಷಕಿ,ಶ್ರೀಮತಿ ದೀಪಾ ಶಶಾಂಕ್ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿನಿಯರು ಸುಶ್ರಾವ್ಯ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಆದಿ ಹಾಡಿದರು. ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆಯವರು ವಂದನಾರ್ಪಣೆ ನೆರವೇರಿಸಿದರು.
ಸಹ ಶಿಕ್ಷಕಿಯರಾದ ಶ್ರೀಮತಿ ಮುಕ್ತಾ ನಾಯ್ಕ, ಶ್ರೀಮತಿ ಅನಿತಾ ಭಟ್ ರವರೊಂದಿಗೆ 10ನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಸುವಿಧಾ ಹೆಗಡೆ ಮತ್ತು ಕುಮಾರಿ ವಾಸವಿ ಜೋಶಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡರು.