ಹೊನ್ನಾವರ: ತಾಲ್ಲೂಕಿನ ಕಾಸರಕೋಡ್ ಭಾಗದ ಅಮಾಯಕ ಮೀನುಗಾರರ ಮೇಲೆ ಹೂಡಿರುವ ಅನಗತ್ಯ ಸುಳ್ಳು ಮೊಕದ್ದಮೆಗಳನ್ನು ಸರಕಾರ ಕೂಡಲೆ ಹಿಂದಕ್ಕೆ ಪಡೆದು ನ್ಯಾಯ ಕೊಡಿಸಬೇಕೆನ್ನುವ ಕುರಿತು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾoತ ಕೊಚರೇಕರ ಲಿಖಿತ ಮನವಿ ಸಲ್ಲಿಸಿದ್ದಾರೆ. ಮನವಿಯನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.
ಪರಿಸರ ಸೂಕ್ಷ್ಮ ಪರಿಸರದಲ್ಲಿ ಯಾವುದೇ ಪರವಾನಗಿ ಪಡೆಯದೆ ರಸ್ತೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಸ್ಥಳೀಯ ಮೀನುಗಾರರು ಪಾರಂಪರಿಕ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸ್ ಬಲದೊಂದಿಗೆ ಎಲ್ಲಾ ಪ್ರತಿಭಟನಾಕಾರರನ್ನು ಅಕ್ರಮವಾಗಿ ಬಂಧಿಸಿ ಅವರನ್ನು ಕೂಡಿ ಹಾಕಿದ್ದರು. ಇದರ ವಿರುದ್ಧ ರಾಷ್ಟ್ರೀಯ ಹಸಿರು ಪೀಠಕ್ಕೆ ಮೇಲ್ಮನವಿ ಸಲ್ಲಿಸದ ಪರಿಣಾಮವಾಗಿ ಈ ಕಾಮಗಾರಿ ಸ್ಥಗಿತವಾಗಿತ್ತು. ಆದರೆ ಸ್ಥಳಿಯ ಆಡಳಿತದ ನೆರವಿನಿಂದ ಅವರ ಮೇಲೆ ಕಿರುಕುಳ ನೀಡುವಂತಹ ಪ್ರಯತ್ನವಾಗಿತ್ತು. ಈ ಹಿನ್ನೆಲೆ ಸರ್ಕಾರವನ್ನು ಒತ್ತಾಯಿಸಿ ಅಮಾಯಕ ಮೀನುಗಾರರ ಮೇಲೆ ಇರುವ ಪ್ರಕರಣ ಹಿಂದಕ್ಕೆ ಪಡೆಯಲು ವಿನಂತಿಸಲಾಗಿದೆ ಎಂದರು.