Slide
Slide
Slide
previous arrow
next arrow

ಕಲಾ ಪ್ರಕಾರಗಳು ಪ್ರಚಲಿತವಾಗಿರಲು ಆಸಕ್ತರಿಗೆ ತರಬೇತಿ ಮುಖ್ಯ: ಎಸ್.ಆರ್.ಹೆಗಡೆ

300x250 AD

ಸಿದ್ದಾಪುರ: ಯಕ್ಷಗಾನ, ನಾಟಕ ಸೇರಿದಂತೆ ಕಲಾ ಪ್ರಕಾರಗಳು ಪ್ರಚಲಿತವಾಗಿರಬೇಕಾದರೆ ಸಂಘಟನೆಯೊoದಿಗೆ ಆಸಕ್ತರಿಗೆ ತರಬೇತಿ ನೀಡುವುದು ಅತಿ ಮುಖ್ಯ. ಅಂತಹ ಕೆಲಸವನ್ನು ಒಡ್ಡೋಲಗ ಹಿತ್ಲಕೈ ಸಂಸ್ಥೆ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹಾರ್ಸಿಕಟ್ಟಾ ಅಘನಾಶಿನಿ ಸಾಂಬಾರು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಹೆಗಡೆ ಕುಂಬಾರಕುಳಿ ಹೇಳಿದರು.
ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಒಡ್ಡೋಲಗ ಹಿತ್ತಲಕೈ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಆಯೋಜಿಸಿದ್ದ ರಾಜೇಂದ್ರ ಕಾರಂತ ರಚನೆಯ ನಮ್ಮ ನಿಮ್ಮೊಳಗೊಬ್ಬ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಪ್ರಾಸ್ತಾವಿಕ ಮಾತನಾಡಿದರು. ಧಾತ್ರಿ ಹೆಗಡೆ ಹಿತ್ಲಕೈ, ಶ್ರೀಪಾದ ಹೆಗಡೆ ಕಲ್ಮನೆ, ಗಣಪತಿ ಹಿತ್ಲಕೈ ಕಾರ್ಯಕ್ರಮ ನಿರ್ವಹಿಸಿದರು. ರಾಕೇಶ ಭಟ್ಟ ಸಿದ್ದಾಪುರ, ಮುರುಗೇಶ ಬಸ್ತಿಕೊಪ್ಪ ಸಹಕರಿಸಿದರು. ವಾಜಗದ್ದೆ ದುರ್ಗಾವಿನಾಯಕ ದೇವಸ್ಥಾನದ ಮೊಕ್ತೇಸರ ಎಸ್.ಎಂ.ಹೆಗಡೆ ಪೇಟೇಸರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ, ದುರ್ಗಾವಿನಾಯಕ ಕೃಷಿಕ ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ ಉಪಸ್ಥಿತರಿದ್ದರು.
ನಂತರ ಪ್ರದರ್ಶನಗೊಂಡ ನಮ್ಮ ನಿಮ್ಮೊಳಗೊಬ್ಬ ನಾಟಕದಲ್ಲಿ ನಾಗರಾಜ ನಾಯ್ಕ ಬರೂರು, ಕೇಶವ ಹೆಗಡೆ ಕಿಬ್ಳೆ, ಪುಷ್ಪಾ ರಾಘವೇಂದ್ರ ಸಾಗರ, ಮಾಧವ ಶರ್ಮ ಕಲಗಾರ, ಪ್ರಸನ್ನಕುಮಾರ ಎನ್.ಎಂ ಸಾಗರ, ಗಣಪತಿ ಬಿ.ಹಿತ್ಲಕೈ, ಶ್ರೀರಾಮ ಯು.ಗೌಡ ಹೊಸೂರು, ಸಂಧ್ಯಾ ಶಾಸ್ತ್ರೀ, ನವೀನಕುಮಾರ ಕುಣಜಿ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.

300x250 AD
Share This
300x250 AD
300x250 AD
300x250 AD
Back to top