ಕುಮಟಾ: ಪಟ್ಟಣದ ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರದರ್ಶಿಸಿದ ವಿವಿಧ ತಿಂಡಿ- ತಿನಿಸುಗಳ ಪ್ರದರ್ಶನ ಗಮನ ಸೆಳೆಯಿತು.
ಪಟ್ಟಣದ ಗಿಬ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ನಡೆದ ವಿವಿಧ ತಿಂಡಿ-ತಿನಿಸುಗಳ ಪ್ರದರ್ಶನ ಸ್ಪರ್ಧೆಗೆ ಬಿಆರ್‌ಪಿ ರೇಖಾ ನಾಯ್ಕ ಚಾಲನೆ ನೀಡಿ, ಮಾತನಾಡಿದ ಅವರು, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ತೊಡಗಿಸುಕೊಳ್ಳುವಿಕೆಯನ್ನು ಮತ್ತು ಸಂಭ್ರಮದ ಶನಿವಾರವನ್ನು ಆಚರಿಸಿದ ಪರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿದ್ದ ಮಹಾತ್ಮಾ ಗಾಂಧಿ ಪ್ರೌಡ ಶಾಲೆಯ ಮುಖ್ಯ ಶಿಕ್ಷಕರಾದ ಪಾಂಡುರಂಗ ವಾಗ್ರೇಕರ್ ಮಾತನಾಡಿ, ಮುಖ್ಯಾಧ್ಯಾಪಕರು ಮತ್ತು ಶಿಕ್ಷಕರು ಆಯೋಜಿಸುವ ಇಲಾಖಾ ಕಾರ್ಯಕ್ರಮದ ಅಚ್ಚು ಕಟ್ಟುತನವನ್ನು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಜೇಕಬ್ ಫರ್ನಾಂಡೀಸ್ ಸ್ವಾಗತಿಸಿದರು. ಶಾಲಾ ಮುಖ್ಯೋದ್ಯಾಪಕಿ ಗೀತಾ ಎಂ. ಪೈ ಪ್ರಾಸ್ತಾವಿಸಿದರು. ಹಿರಿಯ ಶಿಕ್ಷರಾದ ಸಂತೋಷ್ ಮಾವಿನಕಟ್ಟ ವಂದಿಸಿದರು. ಶಿಕ್ಷಕರಾದ ಉದಯ್ ನಾಯ್ಕ್ ನಿರೂಪಿಸಿದರು. ಎಲ್ಲ ಶಿಕ್ಷಕರು ಸಹಕರಿಸಿದರು.
ಶಾಲೆಯ 205 ವಿದ್ಯಾರ್ಥಿನಿಯರು, ಎಲ್ಲಾ ಶಿಕ್ಷಕರು ಸಾಂಪ್ರದಾಯಿಕ ಉಡುಗೆ ಧಿರಿಸಿ ಕಂಗೊಳಿಸುತ್ತಿದ್ದರು. ನೋಂದಾಯಿಸಿದ 111 ವಿದ್ಯಾರ್ಥಿನಿಯರು ಸ್ಪರ್ಧಾ ಕಣದಲ್ಲಿ ಇದ್ದರು. ನಲ್ವತ್ತು ವಿದ್ಯಾರ್ಥಿನಿಯರು ತಯಾರಿಸಿ ವಿಭಿನ್ನ ತಿಂಡಿ-ತಿನಿಸುಗಳ ಗಮನ ಸೆಳೆದವು.