• first
    Slide
    Slide
    previous arrow
    next arrow
  • ಡಿ.24ಕ್ಕೆ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಹಬ್ಬ

    300x250 AD

    ಶಿರಸಿ: ನಗರದ ನರೇಬೈಲಿನ ಮಿಯಾರ್ಡ್ಸ್ ಸಂಸ್ಥೆಯ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಹಬ್ಬವನ್ನು ಡಿ.24 ಶನಿವಾರದಂದು ಬೆಳಿಗ್ಗೆ 11 ಗಂಟೆಯಿಂದ ಆಯೋಜಿಸಲಾಗಿದೆ.
    ಕಾರ್ಯಕ್ರಮವನ್ನು ಸೆಲ್ಕೋ ಸೋಲಾರ್ ಸಿಇಒ ಮೋಹನ್ ಹೆಗಡೆ ಉದ್ಘಾಟಿಸಲಿದ್ದು,ಅಧ್ಯಕ್ಷತೆಯನ್ನು ಮಿಯಾರ್ಡ್ಸ್ ಎಸ್.ಆರ್.ಹೆಗಡೆ ವಹಿಸಲಿದ್ದಾರೆ. ರ‍್ಯಾಂಕ್‌ ವಿಜೇತರಿಗೆ ಸ್ವಾಸ್ಥ್ಯ ಟ್ರಾನ್ಸ್ಫರ್ಮೇಷನ್ ನಿರ್ದೇಶಕ ವಿಜಯಪ್ರಸಾದ್ ನಡೆಸಿಕೊಡಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಉಷಾ ಹೆಗಡೆ, ಜಿ.ಪಂ ಮಾಜಿ ಸದಸ್ಯ ಜಿ.ಎನ್.ಹೆಗಡೆ ಮುರೇಗಾರ್,ದೊಡ್ನಳ್ಳಿ ಗ್ರಾಮ್ ಪಂ. ಅಧ್ಯಕ್ಷೆ ಶ್ರುತಿ ಕಾನಡೆ, ತಾ ಪಂ.ರತ್ನಾ ಶೆಟ್ಟಿ ಆಗಮಿಸಲಿದ್ದಾರೆ.

    ಮಧ್ಯಾಹ್ನ 2.30ರಿಂದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Back to top