ಸಿದ್ದಾಪುರ: ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಚಂಡಿಕಾದೇವಿ ದೇವಾಲಯದ ಪುನರ್ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ವಿದ್ವಾನ್ ವಿಶ್ವನಾಥ ಭಟ್ ನೀರಗಾನ ನೇರವೇರಿಸಿದರು.
ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಚೆಂಡಿಕಾ ದೇವಿಯೂ ಅಪಾರ ಭಕ್ತ ಸಮೂಹವನ್ನು ಹೊಂದಿದೆ. ಶಕ್ತಿ ಪೀಠ ಎಂದೇ ಹೆಸರಾಗಿರುವ ಚೆಂಡಿಕಾ ದೇವಿ ಸನ್ನಿಧಾನವು ಹಲವು ಪವಾಡಗಳಿಗೂ ಕಾರಣವಾದ ಕ್ಷೇತ್ರ. ಜಿಲ್ಲೆ ಹಾಗೂ ಹೊರ ಜಿಲ್ಲೆ ರಾಜ್ಯಗಳಲ್ಲಿನ ಭಕ್ತರು ಚೆಂಡಿಕಾ ದೇವಿ ಸನ್ನಿಧಾನಕ್ಕೆ ಬಂದು ಇಷ್ಟಾರ್ಥ ಸಿದ್ದಿಗಾಗಿ ಪೂಜೆ ಹರಕೆ ಸಲ್ಲಿಸುತ್ತಾರೆ.
ಆದರೆ ದೇವಿ ದೇವಾಲಯವೂ ಪುರಾತನವಾಗಿದ್ದು ಶಿಥಿಲಗೊಂಡಿದೆ. ಇದೇ ಕಾರಣಕ್ಕೆ ಆಡಳಿತ ಮಂಡಳಿಯೂ ದೇವಾಲಯದ ಪುನರ್ ಸ್ಥಾಪನೆಗೆ ತೀರ್ಮಾನಿಸಿದ ಕಾರಣ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ವಿದ್ವಾನ್ ವಿಶ್ವನಾಥ ಭಟ್ ನೀರಗಾನ ಇವರ ಸಮ್ಮುಖದಲ್ಲಿ ನೆರವೇರಿಸಿದರು. ಈ ಶಕ್ತಿ ಕೇಂದ್ರದಲ್ಲಿ ಭವ್ಯ ದೇಗುಲ ನಿರ್ಮಾಣಕ್ಕೆ ಅಂದಾಜು ಖರ್ಚು ಸುಮಾರು 50 ಲಕ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಭಕ್ತರಿಂದ ತನು-ಮನ-ಧನದ ಸಹಕಾರ ನೀರಿಕ್ಷಿಸಲಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷ ಅರುಣ್ ಗೌಡ ಮಳಲಿ, ಸೊರಬಾ ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷ ಉಮಾಕಾಂತ ನೆಲ್ಲೂರು, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ್ ಗೌಡ, ಸ್ಥಳೀಯರಾದ ಸುರೇಶ ಎಂ ಶೇಟ್, ಶ್ರೀಪತಿ ಹೆಗಡೆ, ಸುಬ್ರಾಯ ಗೌಡ, ಚಂದ್ರು ಗೌಡ, ದೇವೇಂದ್ರ ಗೌಡ, ಉಮಾಕಾಂತ ಗೌಡ, ಮಹಾಬಲೇಶ್ವರ ಗೌಡ ಸೇರಿದಂತೆ ಊರನಾಗರಿಕರು ಭಕ್ತರು ಇದ್ದರು.