ಯಲ್ಲಾಪುರ: ಇಲ್ಲಿನ ಉಮ್ಮಚಗಿ ವ್ಯಾಪ್ತಿಯ ಕೋಟೆಮನೆಯಲ್ಲಿ ಸಿದ್ಧಿ ಬಡ ಮಹಿಳೆಯಬ್ಬಳು ಸಾಲ ಮಾಡಿ ಸಾಕಿದ್ದ 46 ಟರ್ಕಿ ಕೋಳಿಗಳಿಗೆ ವಿಷ ಹಾಕಿ ಸಾಯಿಸುವ ಮೂಲಕ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.
ಕೋಟೇಮನೆಯ ಸೋಮಿನ್ ಎಂಬ ಸಿದ್ಧಿ ಮಹಿಳೆ ಸ್ಥಳೀಯ ಸ್ವ ಸಹಾಯ ಸಂಘದಲ್ಲಿ ಸಾಲ ಮಾಡಿ ಹೊಟ್ಟೆಪಾಡಿಗಾಗಿ ಟರ್ಕಿ ಕೋಳಿಗಳನ್ನು ಸಾಕಿದ್ದಳು. ಆದರೆ ಸುತ್ತಮುತ್ತಲೂ ಕೋಳಿಗಳ ಓಡಾಟದಿಂದ ಕಿರಿಕಿರಿಯಾಗುತ್ತಿದೆ ಎಂದು ದುಷ್ಕರ್ಮಿಗಳು ವಿಷಹಾಕಿ ಕೊಂದು ವಿಕೃತಿ ಮೆರೆದಿದ್ದಾರೆ. ಕೋಳಿಗಳ ಸಾವಿನಿಂದ ಸುಮಾರು 70 ಸಾವಿರ ರೂಪಾಯಿ ನಷ್ಟವುಂಟಾಗಿದ್ದು ಮಹಿಳೆ ಕಂಗಾಲಾಗಿದ್ದಾಳೆ.
“ಈ ಹೀನ ಕೃತ್ಯ ಮಾಡಿದವರನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕು. ಸಂತ್ರಸ್ತ ಮಹಿಳೆಗೆ ಪರಿಹಾರ ಒದಗಿಸುವಂತೆ ಪಂಚಾಯತಿಯಲ್ಲಿ ಒತ್ತಾಯಿಸಲಾಗುವುದು” ಎಂದು ಉಮ್ಮಚಗಿ ಗ್ರಾ.ಪಂ ಸದಸ್ಯ ಗ.ರಾ ಭಟ್ಟ ಹೇಳಿದ್ದಾರೆ.