• Slide
    Slide
    Slide
    previous arrow
    next arrow
  • ಚುನಾವಣೆಗಷ್ಟೇ ರಾಜಕೀಯ, ನಂತರ ಅಭಿವೃದ್ಧಿಯೇ ಧ್ಯೇಯ: ಆರ್‌ವಿಡಿ

    300x250 AD

    ದಾಂಡೇಲಿ: ಚುನಾವಣೆಯ ಸಮಯದಲ್ಲಿ ರಾಜಕೀಯ ಅನಿವಾರ್ಯ. ಆದರೆ ಚನಾವಣೆ ಮುಗಿದ ಮೇಲೆ ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಬೇಕು ಎಂದು ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

    ರಾಜ್ಯ ಹಣಕಾಸು ಆಯೋಗದ ಅಂದಾಜು ೨ ಕೋಟಿ ೩೦ ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ನಗರಸಭೆಯ ನೂತನ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಹಳಿಯಾಳ- ದಾಂಡೇಲಿ- ಜೊಯಿಡಾ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಬರಬಾರದು. ಕ್ಷೇತ್ರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕರಿಸಬೇಕು. ದಾಂಡೇಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಈ ಭಾಗದ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿಯೆ ನನ್ನ ಮೂಲಮಂತ್ರವಾಗಿದೆ ಎಂದರು.

    ನಗರೋತ್ಥಾನ ಯೋಜನೆಯಡಿಯಲ್ಲಿಯೂ ಸಾಕಷ್ಟು ರಸ್ತೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಗರ ಹಾಗೂ ತಾಲೂಕಿನ ವಿವಿಧ ಶಾಲೆಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೂ ಅನುದಾನ ಮಂಜೂರು ಮಾಡಲಾಗಿದೆ. ರೂ.೧೦ ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧದ ಕಟ್ಟಡ ನಿರ್ಮಾಣ ಕಾರ್ಯದಲ್ಲಿದೆ ಎಂದ ಅವರು, ರಾಜ್ಯದಲ್ಲೆ ಮಾದರಿಯೆನ್ನಬಹುದಾದ ಹಾಗೂ ಸುಸಜ್ಜಿತವಾದ ನಗರಸಭೆಯ ಕಟ್ಟಡ ಇದಾಗಿದೆ ಎಂದರು.

    300x250 AD

    ವೇದಿಕೆಯಲ್ಲಿ ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ನಾಯ್ಕರ್, ಪೌರಾಯುಕ್ತ ಆರ್.ಎಸ್.ಪವಾರ್, ಕಿರಿಯ ಎಂಜಿನಿಯರ್ ವಿ.ಎಸ್.ಕುಲಕರ್ಣಿ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top